ಅಯ್ಯಪ್ಪ ಭಕ್ತರ ಸುಗಮ ಪ್ರಯಾಣಕ್ಕೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವಕಾಶ ಕಲ್ಪಿಸಿದ್ದಾರೆ. ಅಯ್ಯಪ್ಪನ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ಹುಬ್ಬಳ್ಳಿಯಿಂದ ರೈಲು ವ್ಯವಸ್ಥೆ ಮಾಡಲಾಗಿದೆ.
ಈ ರೈಲು ಹುಬ್ಬಳ್ಳಿಯಿಂದ ನವೆಂಬರ 19 ರಿಂದ, ಜನೆವರಿ 14 ರ ವರೆಗೆ ಪ್ರತಿ ದಿನ ಸಂಚರಿಸಲಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕೋರಿಕೆ ಮೇರೆಗೆ ರೈಲ್ವೇ ಸಚಿವರು ಹುಬ್ಬಳ್ಳಿಯಿಂದ ಶಬರಿವರೆಗೆ ರೈಲು ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಹುಬ್ಬಳ್ಳಿಯಿಂದ ರೈಲು ಸಂಖ್ಯೆ 07371 ರೈಲು ಕೊಟ್ಟಾಯಂ ಹೊರಡಲಿದೆ. ಕೊಟ್ಟಾಯಂ ನಿಂದ ರೈಲು ಸಂಖ್ಯೆ 07372 ರೈಲು ಹುಬ್ಬಳ್ಳಿಗೆ ವಾಪಸಾಗಲಿದೆ.