Download Our App

Follow us

Home » ಕರ್ನಾಟಕ » ರಾಜ್ಯದ ಬ್ರಾಹ್ಮಣ ವಿಧ್ಯಾರ್ಥಿಗಳಿಗೆ 5 ಕೋಟಿ 85 ಲಕ್ಷ ಶಿಷ್ಯವೇತನ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಈ ಸಲವಾದರು ನಡೆಯತ್ತ “ಧಾರವಾಡ ಉತ್ಸವ” ಸಚಿವ, ಸಂತೋಷ ಲಾಡರ ಮೇಲೆ ಜನರ ನಿರೀಕ್ಷೆ

ಅನೇಕ ಬಿರುದಾವಳಿ ಹೊಂದಿರುವ ಧಾರವಾಡ ಕನ್ನಡದ ಗಟ್ಟಿ ನೆಲ. ಧಾರವಾಡ ಐತಿಹಾಸಿಕವುಳ್ಳ ನಗರ, ಇದು ಚಾಲುಕ್ಯರ ಆಳ್ವಿಕೆಯಲ್ಲಿ 12 ನೇ ಶತಮಾನದಷ್ಟು ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ.

ಧಾರವಾಡ ಎಂಬ ಹೆಸರು ಸಂಸ್ಕೃತ ಪದ “ದ್ವಾರಾವತ” ದಿಂದ ಬಂದಿದೆ, ಇದರರ್ಥ “ಬಾಗಿಲು” ಅಥವಾ “ಗೇಟ್‌ವೇ,”. ಧಾರವಾಡವು ಪ್ರಯಾಣಿಕರಿಗೆ ವಿಶ್ರಾಂತಿ ಸ್ಥಳವಾಗಿ ಮತ್ತು ಮಲೆನಾಡು (ಪಶ್ಚಿಮ ಪರ್ವತಗಳು) ಮತ್ತು ಬಯಲು ಸೀಮೆಯ ಹೆಬ್ಬಾಗಿಲು ಆಗಿದೆ.

ಧಾರವಾಡಕ್ಕೆ ಶತ ಶತಮಾನಗಳ ಇತಿಹಾಸವಿದೆ. ವಿವಿಧ ರಾಜವಂಶಗಳು ಧಾರವಾಡನ್ನು ಆಳಿದ್ದಾರೆ. ಬಹಮನಿ ಸುಲ್ತಾನರು 14 ನೇ ಶತಮಾನದಲ್ಲಿ ಜಿಲ್ಲೆಯನ್ನು ವಶಪಡಿಸಿಕೊಂಡ, ನಂತರ ವಿಜಯನಗರ ಸಾಮ್ರಾಜ್ಯವು 1403 ರಲ್ಲಿ ಧಾರವಾಡ ಪಟ್ಟಣದಲ್ಲಿ ಕೋಟೆಯನ್ನು ನಿರ್ಮಿಸಿದ ಇತಿಹಾಸವಿದೆ. 

ತದನಂತರ ಬಿಜಾಪುರದ ಆದಿಲ್ ಶಾಹಿ ರಾಜವಂಶವು ಧಾರವಾಡದ ಮೇಲೆ ಹಿಡಿತ ಸಾಧಿಸಿದ ಹೆಗ್ಗುರುತುಗಳಿವೆ.  

ಔರಂಗಜೇಬ್ ನೇತೃತ್ವದಲ್ಲಿ ಮೊಘಲ್ ಸಾಮ್ರಾಜ್ಯವು 1685 ರಲ್ಲಿ ಕೋಟೆಯನ್ನು ವಶಪಡಿಸಿಕೊಂಡಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಪ್ರಮುಖವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1818 ರಲ್ಲಿ ಧಾರವಾಡವನ್ನು ಸ್ವಾಧೀನಪಡಿಸಿಕೊಂಡ ಬಳಿಕ ಧಾರವಾಡ, ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು ಎಂಬ ಉಲ್ಲೇಖವಿದೆ. 

ಈ ಅವಧಿಯಲ್ಲಿ, ಧಾರವಾಡ ನಗರವು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಮೂಲಸೌಕರ್ಯ ಯೋಜನೆಗಳು, ಮತ್ತು ಕೈಗಾರಿಕಾ ಬೆಳವಣಿಗೆಯೊಂದಿಗೆ ಗಮನಾರ್ಹ ಅಭಿವೃದ್ಧಿಗೆ ಒಳಗಾಯಿತು ಅನ್ನೋದು ಇತಿಹಾಸ ಬಲ್ಲವರಿಗೆ ಗೊತ್ತು. 

ಇಂದು, ಧಾರವಾಡವನ್ನು “ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ” ಎಂದು ಕರೆಯಲಾಗುತ್ತದೆ ಮತ್ತು ಸಂಗೀತ, ಸಾಹಿತ್ಯ ಮತ್ತು ಕಲೆಗೆ ನೀಡಿದ ಕೊಡುಗೆಗಳಿಗೆ ಧಾರವಾಡ, ಹೆಸರುವಾಸಿಯಾಗಿದೆ. 

ನಗರವು ಧಾರವಾಡ ಕೋಟೆ, ಸೋಮೇಶ್ವರ ದೇವಸ್ಥಾನ ಮತ್ತು 1949 ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿಶ್ವವಿದ್ಯಾಲಯದಂತಹ ಗಮನಾರ್ಹ ಹೆಗ್ಗುರುತುಗಳನ್ನು ಹೊಂದಿದೆ.

ಇಂತಹ ಇತಿಹಾಸ ಹೊಂದಿರುವ ಧಾರವಾಡದಲ್ಲಿ, ಯಾಕೋ ಏನೋ ಜಿಲ್ಲಾಡಳಿತ “ಧಾರವಾಡ ಉತ್ಸವ” ಮಾಡಲು ಮನಸ್ಸು ಮಾಡುತ್ತಿಲ್ಲ.

2013 ರ ನಂತರ ಹುಬ್ಬಳ್ಳಿ ಧಾರವಾಡದಲ್ಲಿ ” ಧಾರವಾಡ ಉತ್ಸವ ನಡೆದಿಲ್ಲ. ಪಕ್ಕದ ಕಿತ್ತೂರು, ಲಕ್ಕುಂಡಿ, ಹಂಪಿಯಲ್ಲಿ ಪ್ರತಿ ವರ್ಷ ಉತ್ಸವ ನಡೆಯುತ್ತಿವೆ. ಆದರೆ ಧಾರವಾಡದಲ್ಲಿ 2013 ರ ನಂತರ ಉತ್ಸವ ನಡೆಯದಿರುವದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಧಾರವಾಡ ಜಿಲ್ಲಾಡಳಿತ ” ಧಾರವಾಡ ಉತ್ಸವ ” ಮಾಡುವದನ್ನು ನಿಲ್ಲಿಸಿದ ಬಳಿಕ, ಧಾರವಾಡದ ಕ್ರೀಯಾಶೀಲ ಯುವಕ, ಗಿರೀಶ್ ಹೆಗಡೆ, ಹೆಗಡೆ ಗ್ರೂಪ್ ನಿಂದ 9 ವರ್ಷಗಳ ಅವಧಿಯಲ್ಲಿ ನಾಲ್ಕು ಸಲ ದೊಡ್ಡ ಪ್ರಮಾಣದಲ್ಲಿ ” ಧಾರವಾಡ ಹಬ್ಬ ” ಮಾಡಿಕೊಂಡು ಬಂದಿದ್ದಾರೆ. 

ಸರ್ಕಾರ ಮಾಡುವ ಕೆಲಸವನ್ನು ಹೆಗಡೆ ಗ್ರೂಪ್ ಮಾಡಿದ್ದು, ಧಾರವಾಡ ಹಬ್ಬ ಯಶಸ್ವಿಯಾಗಿ ಮಾಡುತ್ತಾ ಹೊರಟಿದ್ದಾರೆ. 

9 ವರ್ಷಗಳ ಬಳಿಕ ಈ ಸಲವಾದರೂ ಹುಬ್ಬಳ್ಳಿ ಧಾರವಾಡದಲ್ಲಿ ಜಿಲ್ಲಾಡಳಿತ “ಧಾರವಾಡ ಉತ್ಸವ ” ಆಚರಣೆ ಮಾಡಲಿ ಅನ್ನೋದು, ಅವಳಿ ನಗರದ ಜನತೆಯ ಆಗ್ರಹವಾಗಿದೆ.

ತಮ್ಮ ಹೆಸರಿನಲ್ಲಿರುವ ಫೌಂಡೇಶನ್ ವತಿಯಿಂದ, ಉತ್ತಮ ಸೇವೆ ಸಲ್ಲಿಸುತ್ತಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಧಾರವಾಡ ಉತ್ಸವ ನಡೆಸಲು ಮುಂದಾಗ್ತಾರಾ ಕಾದು ನೋಡಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಬಂದ್. ಅವಳಿ ನಗರದಲ್ಲಿ ಬೀದಿಗಿಳಿದ ಕಾಂಗ್ರೇಸ್ಸಿಗರು

ಸಂವಿದಾನ ಶಿಲ್ಪಿ ಡಾ!! ಬಿ ಆರ್ ಅಂಬೇಡ್ಕರ ಸ್ವಾಭಿಮಾನಿ ಅಭಿಮಾನಿ, ಅನುಯಾಯಿಗಳ ಬಳಗದ ಪ ಜಾ ಪ ಪಂ, ಹಿಂದುಳಿದ ವರ್ಗ ಹಾಗು ಅಲ್ಪಸಂಖ್ಯಾತರ ಐಕ್ಯತಾ ವೇದಿಕೆ

Live Cricket

error: Content is protected !!