ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ, ಸರ್ಕಾರಕ್ಕೆ ಕಾಂಗ್ರೇಸ್ ಶಾಸಕ ತನ್ವಿರ ಸೇಠ ಆಗ್ರಹಿಸಿದ್ದಾರೆ. ಸರ್ಕಾರ ಮೀಸಲಾತಿ ಹೆಚ್ಚಿಗೆ ಮಾಡುವವರೆಗೂ ಸಮುದಾಯ ಹೋರಾಟ ಮುಂದುವರೆಸಬೇಕು ಎಂದರು.
ಮುಸ್ಲಿಮ್ ಸಮುದಾಯಕ್ಕೆ ಹಿಂದಿನ ಬಿಜೆಪಿ ಸರ್ಕಾರ ನ್ಯಾಯ ಒದಗಿಸಿಲ್ಲ. ಹೀಗಾಗಿ ಸಮುದಾಯದ ಶೇಕಡಾ 95 ರಷ್ಟು ಜನ ಕಾಂಗ್ರೇಸ್ಸಿಗೆ ಬೆಂಬಲಿಸಿದ್ದಾರೆ. ಕಾಂಗ್ರೇಸ್ ಸರ್ಕಾರ ಇದನ್ನು ಗಮನಿಸಬೇಕು ಎಂದರು.
ಬೇಡಿಕೆ ಈಡೇರಿಸಲು ಆಗೋದಿಲ್ಲವೆಂದರೆ ನೇರವಾಗಿ ಹೇಳಲಿ, ಸಮುದಾಯ ಮುಂದಿನ ತೀರ್ಮಾನ ಮಾಡುತ್ತದೆ ಎಂದು ಖಡಕ್ಕಾಗಿ ಹೇಳಿದರು.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ, ಮುಸ್ಲಿಮರಿಗಿದ್ದ ಶೇಕಡಾ 4 ರಷ್ಟು 2ಬಿ ಮೀಸಲಾತಿಯನ್ನು ರದ್ದುಪಡಿಸಿ, ಶೇಕಡಾ 4 ರ ಮೀಸಲಾತಿ ಪೈಕಿ ಶೇಕಡಾ 2 ರಷ್ಟು ಮೀಸಲಾತಿಯನ್ನು ಲಿಂಗಾಯತರಿಗೆ ಶೇಕಡಾ 2 ರಷ್ಟು ಮೀಸಲಾತಿಯನ್ನು ಒಕ್ಕಲಿಗ ಸಮುದಾಯಕ್ಕೆ 2ಸಿ, 2ಡಿ ಎಂದು ವರ್ಗಿಕರಣ ಮಾಡಿಕೊಟ್ಟಿತ್ತು.
ಬಿಜೆಪಿ ಸರ್ಕಾರ ರದ್ದು ಪಡಿಸಿದ್ದ ಶೇಕಡಾ 4 ರ ಮೀಸಲಾತಿಯನ್ನು ಪ್ರಶ್ನಿಸಿ ಕೋರ್ಟ ಮೆಟ್ಟಲೇರಲಾಗಿತ್ತು. ಮುಂದಿನ ಆದೇಶದವರಿಗೂ ಮೀಸಲಾತಿ ಬದಲಾವಣೆ ಮಾಡದಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ ಎಂದರು.
