ಹಾವೇರಿ ಜಿಲ್ಲೆಯ ಕಲರಫುಲ್ ರಾಜಕಾರಣಿ, ಆಕರ್ಷಣಿಯ ವ್ಯಕ್ತಿತ್ವ ಹೊಂದಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶರಾಗಿದ್ದಾರೆ.
ಮನೋಹರ್ ತಹಶೀಲ್ದಾರ್ ಅವರು, ಹಾನಗಲ್ ಕ್ಷೇತ್ರದಿಂದ ಆರು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಯವರ ಮೋದಿ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಸೇರಿದ್ದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗಾಗಿ ಶ್ರಮಿಸಿದ್ದರು.
ಹಾನಗಲ್ ಕ್ಷೇತ್ರದಲ್ಲಿ ಸಿ ಎಂ ಉದಾಸಿ ಹಾಗೂ ಮನೋಹರ ತಹಸೀಲ್ದಾರ ಅವರು ಪ್ರತಿ ಚುನಾವಣೆಯಲ್ಲಿಯೂ ಸಾಂಪ್ರದಾಯಿಕ ಎದುರಾಳಿಯಾಗುತ್ತಿದ್ದರು.
ಮನೋಹರ ತಹಸೀಲ್ದಾರ ಅವರ ನಿಧನಕ್ಕೆ ರಾಜ್ಯದ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ
