ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದ ಡಿ ಕೆ ಬ್ರದರ್ಸ್, ಉಪ ಚುನಾವಣೆಯಲ್ಲಿ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ತಮ್ಮ ಡಿ ಕೆ ಸುರೇಶರ ಸೋಲಿನ ಬಳಿಕ, ಸಮಯಕ್ಕಾಗಿ ಕಾದು ಕುಳಿತಿದ್ದ ಡಿ ಕೆ ಶಿವಕುಮಾರ, ಚನ್ನಪಟ್ಟಣದಲ್ಲಿ ತಂತ್ರಗಾರಿಕೆ ನಡೆಸಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವ ಮೂಲಕ, ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಕಡೆ ಕ್ಷಣದಲ್ಲಿ ಸಿ ಪಿ ಯೋಗೇಶ್ವರರನ್ನು ಕಾಂಗ್ರೇಸ್ಸಿಗೆ ಕರೆತಂದ ಡಿ ಕೆ ಬ್ರದರ್ಸ, ದಳಪತಿಗಳನ್ನು ಸೋಲಿಸಿ ಸಂಭ್ರಮಿಸಿದ್ದಾರೆ. ಮೈಸೂರು ಭಾಗದಲ್ಲಿ ಎಚ್ ಡಿ ದೇವೇಗೌಡರು ಹಾಗೂ ಡಿ ಕೆ ಬ್ರದರ್ಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಚನ್ನಪಟ್ಟಣದ ಕಣ ರಣರೋಚಕವಾಗಿತ್ತು.