Download Our App

Follow us

Home » ಉಪ ಚುನಾವಣೆ » ಸೋಲಿನ ಬಳಿಕ, ಮುಸ್ಲಿಂ ಸಮುದಾಯ ನೆನಪು ಮಾಡಿಕೊಂಡ ನಿಖಿಲ್. ಸೋಲಿಗೆ ಮುಸ್ಲಿಮ್ಸ್ ಕಾರಣ……

ಸೋಲಿನ ಬಳಿಕ, ಮುಸ್ಲಿಂ ಸಮುದಾಯ ನೆನಪು ಮಾಡಿಕೊಂಡ ನಿಖಿಲ್. ಸೋಲಿಗೆ ಮುಸ್ಲಿಮ್ಸ್ ಕಾರಣ……

ಚನ್ನಪಟ್ಟಣದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ, ಸೋಲಿನ ಬಳಿಕ, ಸೋಲಿಗೆ ಕಾರಣ ಹೊರ ಹಾಕಿದ್ದಾರೆ. 

ಮುಸ್ಲಿಮ್  ಸಮುದಾಯ ಅಂತ ನೇರವಾಗಿ ಹೇಳದೇ, ಒಂದು ಸಮುದಾಯದ ಮತಗಳು, ಕಾಂಗ್ರೇಸ್ಸಿನ ಕಡೆಗೆ ವಾಲಿರುವದು ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ. 

ಆ ಸಮುದಾಯಕ್ಕೆ ಜೆಡಿಎಸ್ ಎಷ್ಟೇ ಕೊಡುಗೆ ಕೊಟ್ಟರು, ಆ ಸಮುದಾಯದ ಮತಗಳು ಪಕ್ಷಕ್ಕೆ ಬರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ,  ಸೋಲಿನಲ್ಲಿ ಸಿಟ್ಟು ಹೊರಹಾಕಿದ್ದಾರೆ. 

ನಿಖಿಲ್ ಕುಮಾರಸ್ವಾಮಿಗೆ ಇದು ಮೂರನೇ ಸೋಲಾಗಿದ್ದು, 3 ಸೋಲು ಅನುಭವಿಸಿರುವ ನಾನು, ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಮುಸ್ಲಿಮ್ ಸಮುದಾಯ ನಂಬಿ, ಜೆಡಿಎಸ್ ರಾಜಕೀಯ ಮಾಡುತ್ತಿಲ್ಲ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ವಿಡಿಯೋ ಎಲ್ಲೆಡೆ ಹರದಾಡಿತ್ತು. ಹೀಗಾಗಿ ಮುಸ್ಲಿಂ ಮತಗಳು ಕಾಂಗ್ರೇಸ್ಸಿಗೆ ಕ್ರೂಡಿಕರಣವಾಗಿದೆ. ಈ ಹಿನ್ನೇಲೆಯಲ್ಲಿ  ನಿಖಿಲ್ ಕುಮಾರಸ್ವಾಮಿ,  ಸೋಲಿನ ಬಳಿಕ, ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!