Download Our App

Follow us

Home » ಉಪ ಚುನಾವಣೆ » ಶಿಗ್ಗಾವಿ ಉಪ ಚುನಾವಣೆ. ಬಸನಗೌಡ ಪಾಟೀಲ ಯತ್ನಾಳ ಮಾತು, ಮುಸ್ಲಿಮ್ ಮತ, ಭರತ ಬೊಮ್ಮಾಯಿ ಸೋಲು .

ಶಿಗ್ಗಾವಿ ಉಪ ಚುನಾವಣೆ. ಬಸನಗೌಡ ಪಾಟೀಲ ಯತ್ನಾಳ ಮಾತು, ಮುಸ್ಲಿಮ್ ಮತ, ಭರತ ಬೊಮ್ಮಾಯಿ ಸೋಲು .

ಶಿಗ್ಗಾವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪ್ರತಿಷ್ಟೆಯ ಕಣವಾಗಿದ್ದ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಗ ಭರತ ಬೊಮ್ಮಾಯಿ ಸೋಲು ಕಂಡಿದ್ದಾರೆ. 

ಫಲಿತಾಂಶದ ಬಳಿಕ ಕ್ಷೇತ್ರದಲ್ಲಿ, ಎಲ್ಲ ಮಗ್ಗಲುಗಳಲ್ಲಿ, ಲಾಭ ನಷ್ಟದ ಕುರಿತು ಮಾತುಕತೆ ನಡೆದಿದೆ. 

ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪರ ಪ್ರಚಾರಕ್ಕೆ ಬಂದಿದ್ದ ಯತ್ನಾಳ, ಪ್ರಚಾರ ಸಭೆಯಲ್ಲಿ ಅಂದು ಆಡಿದ ಆ ಒಂದು ಮಾತು, ಭರತ ಬೊಮ್ಮಾಯಿಯವರ ಹಣೆಬರಹವನ್ನು ಅಂದೆ ಬರೆದಿತ್ತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಬೊಮ್ಮಾಯಿಯವರ ಗೆಲ್ಲುವ ಹುಮ್ಮಸ್ಸಿಗೆ ಯತ್ನಾಳ ಆಡಿದ ಆ ಮಾತು, ತಡೆಯೂಡ್ಡಿತು ಎನ್ನುವ ಚರ್ಚೆಗಳು ನಡೆದಿವೆ. ಯತ್ನಾಳ ಬರದೇ ಹೋಗಿದ್ದರೆ, 10 ರಿಂದ 12 ಸಾವಿರ ಮುಸ್ಲಿಮ್ ಮತಗಳು ಬೊಮ್ಮಾಯಿಯವರ ಪಾಲು ಆಗುತ್ತಿತ್ತು ಎಂದು ಹೇಳಲಾಗಿದೆ.

ಪ್ರತಿ ಚುನಾವಣೆಯಲ್ಲಿಯೂ, ಮುಸ್ಲಿಮರ ಮತಗಳನ್ನು ಪಡೆಯುತ್ತ ಬಂದಿದ್ದ, ಬಸವರಾಜ ಬೊಮ್ಮಾಯಿಯವರು, ಮುಸ್ಲಿಮ್ ಸಮುದಾಯದ ಕೆಲವರ ಜೊತೆ ಉತ್ತಮ ಒಡನಾಟ ಹೊಂದಿದ್ದರು.

ಬಸನಗೌಡ ಪಾಟೀಲ ಯತ್ನಾಳ, ಮುಸ್ಲಿಮರ ಕುರಿತು, ಆಡಿದ ಆ ಒಂದು ಮಾತು, ಮುಸ್ಲಿಮ್ ಮತಗಳು ಚದುರಿ ಹೋಗದಂತೆ ಹಾಗೂ ಕಾಂಗ್ರೇಸ್ಸಿಗೆ ಕ್ರೂಡಿಕರಣ ವಾಗಲು ಕಾರಣವಾಯ್ತು ಎನ್ನಲಾಗಿದೆ.

ವೈಯುಕ್ತಿಕ ನೆಲೆಗಟ್ಟಿನಲ್ಲಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮ್ ಸಮುದಾಯದ ಕೆಲ ನಾಯಕರ ಜೊತೆ ಇಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಆದರೆ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯವನ್ನು ಹಿಯಾಳಿಸಿದ ಪರಿಣಾಮ, ಭರತ ಬೊಮ್ಮಾಯಿಯವರಿಗೆ ಸೋಲಾಯಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ

Karnataka Files
Author: Karnataka Files

Leave a Comment

RELATED LATEST NEWS

error: Content is protected !!