ರಸ್ತೆ ಮಾರ್ಗ ತೋರಿಸುವ ಗೂಗಲ್ ಮ್ಯಾಪ್, ಮೂವರ ಪ್ರಾಣ ತೆಗೆದುಕೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಗೂಗಲ್ ಮ್ಯಾಪ್ ತೋರಿಸಿದಂತೆ ಹೊರಟಿದ್ದ ಕಾರು, ಅಪೂರ್ಣಗೊಂಡ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ದತಗಂಜನಿಂದ ಫರೀದಪುರಕ್ಕೆ ಹೊರಟಿದ್ದರು ಎನ್ನಲಾಗಿದೆ. ಗೂಗಲ್ ಮ್ಯಾಪ ಸಹಾಯದಿಂದ ಹೊರಟಿದ್ದ ಕಾರು ರಾತ್ರಿ ವೇಳೆ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಅಲ್ಲಿರುವ ಜನಕ್ಕೆ ಈ ಘಟನೆ ಮರುದಿನ ಗೊತ್ತಾಗಿದೆ. ಮರಳು ಸಂಗ್ರಹಿಸಲು ಬಂದಾಗ ಕಾರು ಬಿದ್ದಿದ್ದು ಗೊತ್ತಾಗಿದ್ದು, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಒಮ್ಮೊಮ್ಮೆ ಗೂಗಲ್ ನಕಾಶೆ ಕೈ ಕೊಡುವ ಸಾಕಷ್ಟು ಉಧಾಹರಣೆಗಳಿದ್ದು, ರಸ್ತೆ ಗೊತ್ತಿಲ್ಲದಿದ್ದರೆ, ಗೊತ್ತಿದ್ದವರಿಗೆ ಕೇಳಿ ಹೋಗುವದು ಉತ್ತಮ
