ಸಂಡೂರು ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ ಬಳಿಕ ದನಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪ್ಯಾರಿಸ್ ನ ವಿಶ್ವ ವಿಖ್ಯಾತ ಐಫೆಲ್ ಗೋಪುರ ಬಳಿ, ಮಗ ಕರಣ ಜೊತೆ, ಜೈ ಕರ್ನಾಟಕ, ಜೈ ಸಿದ್ದರಾಮಯ್ಯ ಘೋಷಣೆ ಮೊಳಗಿಸಿದ್ದಾರೆ.
ಮಗ ಕರಣ, ಆಪ್ತ ಅಲಿ ಗೊರವನಕೊಳ್ಳರ ಜೊತೆ ಪ್ಯಾರಿಸ್ ಪ್ರವಾಸ ಕೈಗೊಂಡಿರುವ ಸಂತೋಷ್ ಲಾಡ್, ವಿದೇಶದಲ್ಲಿಯೂ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯನವರ ಪರ ಘೋಷಣೆ ಮೊಳಗಿಸಿದ್ದಾರೆ.
