ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು, ಪಕ್ಷದ ಒಳಗೆ ನಡೆಯುತ್ತಿರುವ ಚಟುವಟಿಕೆಯಿಂದ ಬೇಸತ್ತು ಬರೆದಿರುವ ಬಹಿರಂಗ ಪತ್ರವೊಂದು ನವಲಗುಂದ ಕ್ಷೇತ್ರದ ಬಿಜೆಪಿ ಆವರಣದಲ್ಲಿ ಹರಿದಾಡುತ್ತಿದೆ.
ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಿರುವ ಶಂಕರ ಪಾಟೀಲರ ಸುತ್ತ ಕೆಲವು ಸ್ವಯಂ ಘೋಷಿತ ಹಿಂಬಾಲಕರು, ಸಂಬಂಧಿಗಳೆಂದು ಹೇಳಿ ತಿರುಗಾಡುತ್ತಿದ್ದಾರೆ. ಅವರ ಮೇಲೆ ಸ್ವಲ್ಪ ಎಚ್ಚರಿಕೆ ಕಣ್ಣು ಇರಲಿ ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಟಿಕೇಟಗಾಗಿ ಕಾಂಗ್ರೇಸ್ ಮುಖಂಡರ ಜೊತೆ ಅಲೆದಾಡಿ, ಅಲ್ಲಿ ಟಿಕೇಟ ಸಿಗಲ್ಲ ಎಂದುಕೊಂಡು ಇದೀಗ ಬಿಜೆಪಿ ಪಡಸಾಲೆಯಲ್ಲಿ ಶಂಕರ ಪಾಟೀಲರು ನಮ್ಮ ಸಂಬಂಧಿಕರು ಎಂದುಕೊಂಡು ಓಡಾಡುತ್ತಿದ್ದಾರೆ.
ಇದು ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ಪತ್ರದಲ್ಲಿ ಹೇಳಿದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.
