ಜಿ ಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಬಸವರಾಜ ಮುತ್ತಗಿ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಧಾರವಾಡ ಉಪ ನಗರ ಠಾಣೆಯಲ್ಲಿ ದೂರು ಧಾಖಲು ಮಾಡಿದ್ದಾರೆ.
ಮಾಫಿ ಸಾಕ್ಷಿಯಾದಾಗಿನಿಂದ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ ಎಂದಿರುವ ಅವರು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದಿದ್ದಾರೆ. ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು, ಮಾಫಿ ಸಾಕ್ಷಿಯಾಗಿದ್ದೇನೆ ಎಂದಿದ್ದಾರೆ.
ಅಶ್ವಥ್ ಎಂಬುವವರು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತು ಮುತ್ತಗಿ ಉಪ ನಗರ ಠಾಣೆಯಲ್ಲಿ ದೂರು ಧಾಖಲು ಮಾಡಿದ್ದಾರೆ.
ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಮುತ್ತಗಿಗೆ ಕೋರ್ಟ ಆದೇಶದಂತೆ ಸಿ ಆರ್ ಪಿ ಎಫ್ ಭದ್ರತೆ ಒದಗಿಸಲಾಗಿದೆ.
