ಜೆಡಿಎಸ್ ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವದು ನಿಜ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ ಹೇಳಿದ್ದಾರೆ.
ಚನ್ನಪಟ್ಟಣದ ಚುನಾವಣೆ ಸಂದರ್ಭದಲ್ಲಿ ಹಿರಿಯ ಶಾಸಕ ಜಿ ಟಿ ದೇವೇಗೌಡರನ್ನು, ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಮಂಜುನಾಥ ತಿಳಿಸಿದ್ದಾರೆ.
ಜೆಡಿಎಸ್ ನ ಶಾಸಕರು ಕಾಂಗ್ರೇಸ್ ಸೇರ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅನುದಾನದ ವಿಷಯವಾಗಿ ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಇದೆ. ಜೆಡಿಎಸ್ ಶಾಸಕರು ಕಾಂಗ್ರೇಸ್ ಸೇರ್ತಾರೆ ಅನ್ನೋ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಹಾಗೇ ಆಗುವ ಸಾಧ್ಯತೆ ಕಡೆಗಣಿಸುವಂತಿಲ್ಲ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ ಸ್ಪೋಟಕ ಹೇಳಿಕೆ ನೀಡಿದ್ದಾರೆ.
