ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತಗೆ ಚುನಾವಣೆ ನಡೆಯುವದು ಮತ್ತಷ್ಟು ತಡವಾಗಲಿದೆ.
ಚುನಾವಣೆ ನಡೆಸುವಂತೆ ಹೈಕೋರ್ಟ 12 ವಾರಗಳ ಕಾಲ ಸಮಯ ನೀಡಿತ್ತು. ಸರ್ಕಾರ, ಡಿಸೆಂಬರ್ 19 ರ ವರೆಗೆ ಮೀಸಲಾತಿ ನಿಗದಿ ಮಾಡಿ, ಮೀಸಲಾತಿ ಪ್ರಕ್ರಿಯೆ ಮುಗಿಸುವದಾಗಿ 2023 ರ ಡಿಸೆಂಬರ್ 19 ರಂದು ನ್ಯಾಯಾಲಯಕ್ಕೆ ಹೇಳಿತ್ತು.
ಆದರು ಸಹ ಸರ್ಕಾರ, ಕೋರ್ಟ ನೀಡಿದ ಸಮಯದಲ್ಲಿ ಮೀಸಲಾತಿ ನಿಗದಿ ಮಾಡದಿರುವದಕ್ಕೆ, ಚುನಾವಣಾ ಆಯೋಗ, ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ನಡೆಸಲು ಸರ್ಕಾರ ಮೀಸಲಾತಿ ನಿಗದಿ ಪಡಿಸಲು ಜನೆವರಿ ವರೆಗೆ ಮತ್ತೆ ಕಾಲಾವಕಾಶ ಕೋರಿದೆ. ಕೊಡಗು ಜಿಲ್ಲೆಯ ಮೀಸಲಾತಿ ನಿಗದಿ ಮಾಡುವದು ಬಾಕಿ ಉಳಿದಿದೆ ಎಂದು ಸರ್ಕಾರ ಹೈಕೋರ್ಟ ಗಮನಕ್ಕೆ ತಂದಿದೆ.
ಕಾಲಾವಕಾಶ ನೀಡುವ ಬಗ್ಗೆ ಡಿಸೆಂಬರ್ 12 ರಂದು ನಡೆಯುವ ವಿಚಾರಣೆ ಸಂದರ್ಭದಲ್ಲಿ, ನಿರ್ಧರಿಸಲಾಗುವದೆಂದು ಹೈಕೋರ್ಟ ಹೇಳಿದೆ.
