ಅದೊಂದು ಘೋಷಣೆ ಕ್ಷಣಮಾತ್ರದಲ್ಲಿ ರಾಜ್ಯಾಧ್ಯಂತ ಎಲ್ಲರ ಬಾಯಲ್ಲೂ ಕೇಳಿ ಬಂದಿತ್ತು. “ಹೌದೋ ಹುಲಿಯಾ”
” ಹೌದೋ ಹುಲಿಯಾ ” ಈ ಘೋಷಣೆ ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಕೊಟ್ಟಂತಾಗಿತ್ತು.
ಬೆಳಗಾವಿ ಜಿಲ್ಲೆ ಐನಾಪುರದ ಪೀರಪ್ಪ ಕಟ್ಟೀಮನಿ ಎಂಬಾತ, ಸಿದ್ದರಾಮಯ್ಯನವರು ಕಾಗವಾಡದ ಉಪಚುನಾವಣೆಯ ಪ್ರಚಾರ ಸಭೆಗೆ ಬಂದಾಗ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಬಗ್ಗೆ ಪೀರಪ್ಪ, ಸಿದ್ದರಾಮಯ್ಯನವರ ಮಾತಿಗೆ ” ಹೌದೋ ಹುಲಿಯಾ ” ಅಂತಾ ಡೈಲಾಗ್ ಹೊಡೆದಿದ್ದರು.
ಅಂದು ಪೀರಪ್ಪ ಕಟ್ಟೀಮನಿ ಹೊಡೆದಿದ್ದ, ‘ಹೌದೋ ಹುಲಿಯಾ ಡೈಲಾಗ್ ಎಲ್ಲೆಡೆ ವೈರಲ್ ಆಗಿದೆ. ಆ ಡೈಲಾಗಿಗೆ 5 ವರ್ಷ ತುಂಬಿವೆ.
ಇವತ್ತಿಗೂ ಸಿದ್ದರಾಮಯ್ಯನವರು ಮಾತನಾಡುವಾಗಲೆಲ್ಲಾ “ಹೌದೋ ಹುಲಿಯಾ ” ಡೈಲಾಗ್ ಕೇಳಿ ಬರುತ್ತಿದೆ. ಈ ಡೈಲಾಗ್ ಅಷ್ಟೊಂದು ಪ್ರಸಿದ್ದಿ ಪಡೆದಿದೆ.
