ಅಮೆರಿಕದ ಚಿಕಾಗೋದಲ್ಲಿ ಶನಿವಾರ ಮುಂಜಾನೆ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ವಿಧ್ಯಾರ್ಥಿ, ಎಂ ಬಿ ಎ ಓದಲು ಅಮೆರಿಕಕ್ಕೆ ತೆರಳಿದ್ದ ಎನ್ನಲಾಗಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯ ಯುವಕ 22 ವಯಸ್ಸಿನ ಸಾಯಿ ತೇಜ ನೂಕರಾಪು ಎಂಬಾತನನ್ನು ಅಮೇರಿಕಾದ ಪೆಟ್ರೋಲ್ ಪಂಪ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಸಾಯಿ ತೇಜ, ಅಭ್ಯಾಸ ಮಾಡುತ್ತಾ, ಅಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಡೆದ ಘಟನೆ ಬಗ್ಗೆ ಅಲ್ಲಿನ ಪೊಲೀಸರು, ಸಾಯಿ ತೇಜನ ಕುಟುಂಬಕ್ಕೆ, ಕೊಲೆಯಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದಿಂದ ಪಡೆದ ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ, ಭಾರತೀಯ ಕಾಲಮಾನ ಶುಕ್ರವಾರ ತಡರಾತ್ರಿ, ಚಿಕಾಗೋ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಗೊತ್ತಾಗಿದೆ.
ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ತೆಲಂಗಾಣ ಸರ್ಕಾರ, ಅಮೇರಿಕೆಯ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
