ಆರ್ ಎಸ್ ಎಸ್ ವರಿಷ್ಟ ಮೋಹನ್ ಭಾಗವತ್ ಅವರು ಮಹಾರಾಷ್ಟ್ರದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಭಾರತೀಯ ಪ್ರತಿ ಕುಟುಂಬಗಳಲ್ಲಿ ಕನಿಷ್ಠ ಮೂರು ಮಕ್ಕಳಾದರು ಇರಲಿ ಎಂದು ಹೇಳಿದ್ದಾರೆ.
ಒಂದು ಸಮುದಾಯದ ಜನಸಂಖ್ಯೆಯು 2.1 ರ ಫಲವತ್ತತೆ ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿನಲ್ಲಿದೆ ಎಂದರ್ಥ ಎಂದಿರುವ ಅವರು ಇದರಿಂದಾಗಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವದಲ್ಲಿಲ್ಲ ಎಂದಿದ್ದಾರೆ.
ಆದ್ದರಿಂದ ನಮ್ಮ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು” ಎಂದು ಮೋಹನ ಭಾಗವತ್ ಅವರು ಹೇಳಿದ್ದಾರೆ. ಮೋಹನ ಭಾಗವತರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಹೆಚ್ಚು ಮಕ್ಕಳನ್ನು ಹೆತ್ತರೆ, ಅವರ ಪಾಲನೆ, ಪೋಷಣೆ ಮಾಡುವದು ಹೇಗೆ ಎಂದು ಪ್ರಶ್ನೆ ಮಾಡಿದರೆ, ಕೆಲವರು, ಮೋಹನ ಭಾಗವತ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ಅವರು ಮರಾಠಿಯಲ್ಲಿ ಮಾತನಾಡಿರುವ ವಿಡಿಯೋ ಇಲ್ಲಿದೆ.
