ದಕ್ಷಿಣ ದೆಹಲಿಯಲ್ಲಿ ತ್ರಿವಳಿ ಹತ್ಯೆ ನಡೆದಿದೆ. ನೆಬ್ಸರಾಯ್ ಪ್ರದೇಶದಲ್ಲಿ ಗಂಡ ಅವನ ಹೆಂಡತಿ ಮತ್ತು ಮಗಳನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ರಾಜೇಶ್, ಕೋಮಲ, ಕವಿತಾ ಎಂಬುವವರನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ರಾಜೇಶರ ಮಗ ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೆಹಲಿ ಪೋಲಿಸರು, ಸ್ಥಳಕ್ಕೆ ಆಗಮಿಸಿದ್ದು, ಹಂತಕರ ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ತ್ರಿವಳಿ ಕೊಲೆ ದೆಹಲಿಯಲ್ಲಿ ದೊಡ್ಡ ಸದ್ದು ಮಾಡಿದೆ.
