ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ನಾಳೆಯಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತ್ತೊಂದೆಡೆ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ರೂಪುರೇಷೆ ಸಿದ್ದಪಡಿಸಿದ್ರೆ, ಸರ್ಕಾರ ಸಹ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಗೆ ಉತ್ತರಿಸಲು ಸಿದ್ದತೆ ಮಾಡಿಕೊಂಡಿದೆ.
ಮೈಸೂರಿನ ಮೂಡಾ ಹಗರಣ, ವಕ್ಫ ವಿಚಾರ, ವಾಲ್ಮೀಕಿ ಹಗರಣ, ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸದ್ದು ಮಾಡುವ ಸಾಧ್ಯತೆ ಇದೆ.
ಇದೇ ವೇಳೆ ಕಾಂಗ್ರೇಸ್ ಸರ್ಕಾರ ಸಹ, ಕೊರೋನಾ ಸಮಯದಲ್ಲಿ ನಡೆದ ಬ್ರಷ್ಟಾಚಾರದ ಮೈಕಲ್ ಕುನ್ನಾ ವರದಿ, ಬಿ ಡಿ ಎ ಹಗರಣ, ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟಗಳಂತಹ ವಿಷಯ ಪ್ರಸ್ತಾಪಿಸಲು ತಯಾರಾಗಿದೆ.
ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಅಗಲಿದ ನಾಯಕರುಗಳಿಗೆ ಸಂತಾಪ ಸೂಚಿಸಿದ ಬಳಿಕ ಅಧಿಕೃತ ಕಲಾಪ ಆರಂಭವಾಗಲಿದೆ