ಕಳೆದೆರಡು ದಿನಗಳಿಂದ ಧಾರವಾಡ ಉಪನಗರ ಠಾಣೆ ಇನ್ಸಪೆಕ್ಟರ್ ದಯಾನಂದ ಶೇಗುಣಸಿಯವರ ಬಗ್ಗೆ ಹರಡಿದ್ದ ತರಹೇವಾರಿ ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ.
ಧಾರವಾಡ ಉಪನಗರ ಠಾಣೆ ಇನ್ಸಪೆಕ್ಟರ್ ದಯಾನಂದ ಆರೋಗ್ಯ ಸಮಸ್ಯೆಯಿಂದಾಗಿ ರಜೆ ಪಡೆದುಕೊಂಡಿದ್ದು, ಸಧ್ಯ ಆರೋಗ್ಯವಾಗಿದ್ದಾರೆ ಎಂದು ಅವರ ಅಪ್ತ ಮೂಲಗಳು ಖಾತ್ರಿ ಪಡಿಸಿವೆ.
ಇನ್ಸಪೆಕ್ಟರ್ ದಯಾನಂದ ಅವರ ಅಪ್ತಬಳಗದಲ್ಲಿ ಗುರುತಿಸಿಕೊಂಡಿರುವರು ವಾಟ್ಸಪ್ಪ್ ಸ್ಟೇಟಸ್ ಹಾಕಿಕೊಂಡಿದ್ದು, ಯಾರು ಸಹ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದ್ದಾರೆ.
ದಯಾನಂದ ಅವರು ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅವರ ಅಪ್ತರು ತಿಳಿಸಿದ್ದಾರೆ.