ವಿಶ್ವವಿಖ್ಯಾತ ತಬಲಾ ವಾದಕ ಹಾಗೂ ಪದ್ಮವಿಭೂಷಣ ಉಸ್ತಾದ್ ಜಾಕಿರ್ ಹುಸೇನ್ (73) ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ್ದರು. ಕೇಂದ್ರ ಸರ್ಕಾರ ಅವರಿಗೆ 2023 ರಲ್ಲಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು.
ಮೂರು-ಗ್ರ್ಯಾಮಿ ಪ್ರಶಸ್ತಿ ವಿಜೇತರೂ ಆಗಿದ್ದ ಜಾಕಿರ ಹುಸೇನ್, ತಬಲಾ ಮಾಂತ್ರಿಕರಾಗಿದ್ದರು.
ಅವರ ನಿಧನದ ಸುದ್ದಿಯಿಂದ ಅವರ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.
73 ವರ್ಷದ ಉಸ್ತಾದ ಜಾಕಿರ ಹುಸೇನ್, ವಿಶ್ವದಾಧ್ಯಂತ ಹೆಸರು ಮಾಡಿದ್ದರು. ದೊಡ್ಡ ಅಭಿಮಾನಿ ಬಳಗ ಹೊಂದಿದ್ದರು.