ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ದೇವರ ಕೋಣ ನಾಪತ್ತೆಯಾಗಿದೆ.
ಮಕರಿ ಗ್ರಾಮದ ದುರ್ಗಾ ದೇವಿ ಹೆಸರಲ್ಲಿ ನಾಲ್ಕು ವರ್ಷಗಳ ಹಿಂದೆ ಕೋಣವನ್ನು ಬಿಡಲಾಗಿತ್ತು. ದುರ್ಗಾ ದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ಕೋಣ ಗ್ರಾಮದಲ್ಲಿ ಓಡಾಡುತ್ತಿತ್ತು.
ಎರಡು ತಿಂಗಳ ಹಿಂದೆ ನಾಪತ್ತೆಯಾಗಿರುವ ಕೋಣ ಹುಡುಕಿದರು ಸಿಗದೇ ಇದ್ದಾಗ. ಗ್ರಾಮದ ಜನ ಇದೀಗ ರಟ್ಟೀಹಳ್ಳಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.
ನಾಪತ್ತೆಯಾಗಿರುವ ಕೋಣವನ್ನು ಹುಡುಕಿ ಕೊಡುವಂತೆ ಮಕರಿಯ ಗ್ರಾಮಸ್ಥರು ರಟ್ಟೀಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ.