ಕೇರಳದ ವಯನಾಡು ಬಳಿ ನಿನ್ನೇ ಅಮಾನುಷ ಕೃತ್ಯವೊಂದು ನಡೆದಿದೆ.
ಪ್ರವಾಸಕ್ಕೆ ಬಂದಿದ್ದ ಕಾರೊಂದು ಓರ್ವ ವ್ಯಕ್ತಿಯನ್ನು ಸುಮಾರು ಅರ್ಧ ಕಿಲೋಮೀಟರನಷ್ಟು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಕೇರಳದಲ್ಲಿ ಬುಡಕಟ್ಟು ಯುವಕನೊಬ್ಬನನ್ನು ಪ್ರವಾಸಿಗರು, ಅಮಾನುಷವಾಗಿ ಅರ್ಧ ಕಿಲೋಮೀಟರ್ ಎಳೆದೊಯ್ದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ವಯನಾಡಿನ ಮನಂತವಾಡಿಯಲ್ಲಿ ಈ ಘಟನೆ ನಡೆದಿದೆ. ಮತನ್ ಎಂಬ ಬುಡಕಟ್ಟು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿದ್ದವರು ಕಾರು ನಿಲ್ಲಿಸುವಂತೆ ಕೂಗಾಡಿದರೂ, ದುಷ್ಟ ಚಾಲಕ ಕಾರು ನಿಲ್ಲಿಸದೆ ಅಮಾನುಷ ಕೃತ್ಯ ಎಸಗಿದ್ದಾನೆ.