ಮಂಡ್ಯದಲ್ಲಿ ನಾಳೆಯಿಂದ ನಡೆಯುವ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಧಾರವಾಡ ಭಾಗದಲ್ಲಿ ಕಲಾವಿದರಿಗೆ ಅವಕಾಶ ನಿರಾಕರಿಸಲಾಗಿದೆ.
ಅವಕಾಶ ನೀಡುವಂತೆ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿಯವರು ಮಾಡಿದ ಶಿಫಾರಸ್ಸು ಕಸದ ಬುಟ್ಟಿಗೆ ಸೇರಿದೆ.
ಜಿಲ್ಲಾ ಸಾಹಿತ್ಯ ಪರಿಷತ್ ನಿಂದ ಶಿಫಾರಸು ಮಾಡಿದ ಕಲಾವಿದರಿಗೆ ಅವಕಾಶ ನೀಡದೆ ಇರುವುದನ್ನು ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ್ ಅಂಗಡಿ ಖಂಡಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐ ಎಮ್ ಒಲ್ಲೆಪ್ಪನವರ ( I M ಟೇಲರ್ ) ಹಾಗೂ ಶ್ರೀಮತಿ ಶೋಭಾ ಜಾಬೀನ್ ಇವರನ್ನು ಶಿಫಾರಸ್ಸು ಮಾಡಿ ಪತ್ರ ಕಳಿಸಲಾಗಿತ್ತು.