ಕರುವಿಗೆ ಡಿಕ್ಕಿ ಹೊಡೆದು 200 ಮೀಟರನಷ್ಟು ಎಳೆದುಕೊಂಡು ಹೋಗುತ್ತಿದ್ದ ಕಾರನ್ನು, ಹಸುಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ಘಟನೆ ನಡೆದಿದೆ.
ಛತ್ತಿಸಗಡದ ರಾಯ್‌ಗಢದಲ್ಲಿ ಈ ಘಟನೆ ನಡೆದಿದ್ದು, ಹಸುಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ವಿಡಿಯೋ ವೈರಲ್ ಆಗಿದೆ.
ಕರುವಿಗೆ ಡಿಕ್ಕಿ ಹೊಡೆದ ನಂತರ ಹಸುಗಳು ಕಾರನ್ನು ತಡೆದಿವೆ. ಛತ್ತೀಸ್‌ಗಢದಿಂದ ಅಭೂತಪೂರ್ವ ದೃಶ್ಯಗಳು ಇದೀಗ ಎಲ್ಲೆಡೆ ವೈರಲ್ ಆಗಿವೆ.
ಕಾರು ಚಾಲಕ ಕರುವನ್ನು ಡಿಕ್ಕಿ ಹೊಡೆದು ಸುಮಾರು 200 ಮೀಟರ್ ಎಳೆದಿದ್ದಾನೆ. ಅಪಘಾತವಾದ ತಕ್ಷಣ ಹಸುಗಳು ಓಡಿ ಬಂದು ಕಾರಿನ ಮುಂದೆ ನಿಂತಿದ್ದರಿಂದ ಕಾರು ಓಡಲು ಸಾಧ್ಯವಾಗಲಿಲ್ಲ.
ರಾಯಗಡದ ಸ್ಟೇಷನ್ ಚೌಕ್ ಬಳಿ ಈ ಘಟನೆ ನಡೆದಿದ್ದು, ಜನರು ಕರುವನ್ನು ರಕ್ಷಿಸಿದ್ದಾರೆ. ಈಗ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ