ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬಿದ್ದಿದೆ.
ಆರಂಭದಲ್ಲಿ ಬಾಡೂಟದ ವಿಷಯವಾಗಿ ಪ್ರಗತಿಪರರ ಆಕ್ರೋಶಕ್ಕೆ ಎದುರಿಸಿದ್ದ ಸಮ್ಮೇಳನ ಕಡೆಗೂ ಯಶಸ್ವಿಯಾಗಿದೆ.
ಸಸ್ಯಾಹಾರಿಯೇ ಶ್ರೇಷ್ಟ ಅನ್ನುವಷ್ಟರ ಮಟ್ಟಿಗೆ ಬಾಡೂಟದ ಪ್ರತಿಭಟನೆಗೆ ಬಗ್ಗಿರದ ಜಿಲ್ಲಾಡಳಿತ, ಇವತ್ತು ಸಾಹಿತ್ಯಾಸಕ್ತರಿಗೆ ಊಟದ ಜೊತೆ ಮೊಟ್ಟೆ ಕೊಟ್ಟಿದ್ದು ವಿಶೇಷವಾಗಿತ್ತು.
