ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ BRTS ಚಿಗರಿ ಬಸ್ಸುಗಳು ಒಂದೊಂದಾಗಿ ಗುಜರಿ ಕಡೆಗೆ ಮುಖ ಮಾಡುತ್ತಿವೆ.
ಹುಬ್ಬಳ್ಳಿ ಧಾರವಾಡ ನಡುವೆ ಒಟ್ಟು ಒಂದನೂರು ಬಸ್ಸುಗಳನ್ನು ರಸ್ತೆಗಿಳಿಸಲಾಗಿತ್ತು. ಈ ಪೈಕಿ ಬಹುತೇಕ ಬಸ್ಸುಗಳು ನಿರ್ವಹಣೆ ( maintenance ) ಇಲ್ಲದೆ ಓಡಾಡುತ್ತಿವೆ.
ಚಿಗರಿ ಬಸ್ಸಿನೊಳಗಿದ್ದ ಆಯಾ ನಿಲ್ದಾಣಗಳನ್ನು ತೋರಿಸುವ ಫಲಕಗಳು ಬಂದಾಗಿವೆ. ಅಲ್ಲದೇ ಹವಾನಿಯಂತ್ರಿತ ವ್ಯವಸ್ಥೆ ಬಹುತೇಕ ಬಸ್ಸುಗಳಲ್ಲಿ ಬಂದ ಆಗುವ ಹಂತಕ್ಕೆ ತಲುಪಿವೆ.
ಕೆಲವು ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತಿರುವದು ಸುದ್ದಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ BRTS ಯೋಜನೆ ಜಾರಿಗೊಂಡ ಬಳಿಕ ಅವಳಿ ನಗರ ಅಭಿವೃದ್ಧಿಯಾಗುತ್ತಿದೆ ಎಂದೇ ತಿಳಿದಿದ್ದರು.
ಚಿಗರಿ ಬಸ್ಸು ಹತ್ತಿದವರು, ಬಸ್ಸಿನೊಳಗೆ ಇರುವ ಅವ್ಯವಸ್ಥೆ ಕಂಡು ಕ್ಯಾಕರಿಸಿ ಉಗಳುವದೊಂದೇ ಬಾಕಿ ಉಳಿದಿದೆ.
