ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸರು ನಾಗರಿಕರ ಸುರಕ್ಷತೆಗೆ ಹೆಚ್ಚು ಒತ್ತು ಕೊಡುತ್ತಿರುವದು ಮತ್ತೊಮ್ಮೆ ಸಾಬೀತಾಗಿದೆ.
11 ವರ್ಷದ ಬಾಲಕಿಯೊಬ್ಬಳು ತಂದೆಯಿಂದ ಬೇರ್ಪಟ್ಟು ಹುಬ್ಬಳ್ಳಿಯ KIMS BRTS ನಿಲ್ದಾಣದ ಬಳಿ ಅಳುತ್ತ ನಿಂತಿದ್ದ ಬಗ್ಗೆ BRTS ಸಿಬ್ಬಂದಿಯಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಲಕಿಯನ್ನು ಸುರಕ್ಷಿತವಾಗಿ ಆಕೆಯನ್ನು ಪಾಲಕರ ವಶಕ್ಕೆ ನೀಡಿದ್ದಾರೆ.
ಬಾಲಕಿಯಿಂದ ಪೋಷಕರ ವಿವರ ಪಡೆದು, ಅವರನ್ನು ಸಂಪರ್ಕಿಸಿ, ಬಾಲಕಿಯನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
