ಸಾಮಾನ್ಯವಾಗಿ ಯಾರಾದರೂ ಹಿರಿಯರು, ನಾಯಕರು ತೀರಿಕೊಂಡಾಗ ಅವರ ಅಂತ್ಯಸಂಸ್ಕಾರದ ಬಳಿಕ ಸಮಾಧಿ ಅಥವಾ ಸ್ಮಾರಕ ಮಾಡಲಾಗುತ್ತದೆ.
ಆದರೆ ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಅಂತ್ಯಸಂಸ್ಕಾರದ ಕುಣಿಯನ್ನೇ ದೇವಸ್ಥಾನ ಮಾದರಿಯಲ್ಲಿ ನಿರ್ಮಿಸಿರೋ ಅಪರೂಪದ ಪ್ರಸಂಗ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗೋವನಕೊಪ್ಪದ ಬಸವಣ್ಣೆಪ್ಪ ಗಂಗಪ್ಪ ಹೊರಟ್ಟಿ ಎಂಬ 84 ವರ್ಷದ ಹಿರಿಯರು ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಅದ್ಭುತವಾದ ಕುಣಿ ನಿರ್ಮಾಣ ಮಾಡಲಾಗಿದೆ
ಗೋವನಕೊಪ್ಪದ ದೊಡ್ಡ ರೈತರಾಗಿದ್ದರ ಬಸವಣ್ಣೆಪ್ಪ, ನಿನ್ನೇ ರಾತ್ರಿ ವಿಧಿವಶರಾಗಿದ್ದಾರೆ. ಇವರ ಅಂತ್ಯಸಂಸ್ಕಾರದ ಕುಣಿಯನ್ನೇ ವಿಶೇಷವಾದ ದೇವಸ್ಥಾನ ಮಾದರಿಯಲ್ಲಿ ನಿರ್ಮಾಣ ಮಾಡಿ. ಹಿರಿಯರ ಚೇತನಕ್ಕೆ ಗೌರವ ಸಲ್ಲಿಸಲಾಗಿದೆ.
ಬಸವಣ್ಣೆಪ್ಪನವರ ಜಮೀನಿನಲ್ಲಿ ಐದು ಗುಂಟೆ ಜಾಗದಲ್ಲಿ ವಿಶಾಲವಾದ ಕುಣಿಯನ್ನು ನಿರ್ಮಿಸಲಾಗಿದೆ. ತೀರ್ಥಕುಂಡ ಭಾವಿಯಂತೆ ಮೆಟ್ಟಿಲುಗಳನ್ನು ಮಾಡಿ. ಮಧ್ಯದಲ್ಲಿ ದೇವಸ್ಥಾನ ಮಾಡಲಾಗಿದ್ದು, ಆ ದೇವಸ್ಥಾನದಲ್ಲಿಯೇ ಪಾರ್ಥಿವ ಶರೀರ ಇಡಲು ವ್ಯವಸ್ಥೆ ಮಾಡಲಾಗಿದೆ.
ಮೇಲ್ಗಡೇ ಈಶ್ವರ ಲಿಂಗವನ್ನೂ ಮಣ್ಣಿನಲ್ಲೇ ಮಾಡಿದ್ದಾರೆ. ಯಾವುದೇ ನಿರ್ಮಾಣ ಸಾಮಗ್ರಿ ಬಳಸದೇ ಕೇವಲ ನೆಲವನ್ನೇ ಅಗೆಯುತ್ತ ಈ ದೇವಸ್ಥಾನ ಮಾದರಿಯ ಕುಣಿ ಮಾಡಲಾಗಿದೆ.
ಮೊದಲು ಜೆಸಿಬಿ ಬಳಿಸಿ ಆ ಬಳಿಕ ಗುಮ್ಮಗೋಳದ ಕಾರ್ಮಿಕರು ಈ ವಿಶೇಷ ಕುಣಿಯನ್ನು ನೆಲ ಅಗೆಯುವ ಮೂಲಕ ಕೆತ್ತಿದ್ದಾರೆ.
