ಬೆಳಗಾವಿಯಲ್ಲಿ ನಾಳೆ ನಡೆಯಲಿರುವ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಖಂಡ ಧಾರವಾಡ ಜಿಲ್ಲೆಯಿಂದ ಸುಮಾರು 25 ಸಾವಿರದಷ್ಟು ಜನ ಕಾರ್ಯಕ್ರಮಕ್ಕೆ ಹೊರಡಲಿದ್ದಾರೆ.
ಬೆಳಗಾವಿಗೆ ಹೋಗುತ್ತಿರುವ ಜನರಿಗೆ, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಉಪಹಾರದ ವ್ಯವಸ್ಧೆ ಮಾಡಿದ್ದಾರೆ.
ಧಾರವಾಡದಿಂದ 20 ಕಿಲೋಮೀಟರ್ ದೂರ ಇರುವ ಮುಲ್ಲಾ ದಾಬಾದಲ್ಲಿ ಸುಮಾರು 25 ಸಾವಿರ ಜನರಿಗೆ ವಿನೋದ ಅಸೂಟಿ ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಅಧಿಕಾರ ಇಲ್ಲದಿದ್ದರು, ಜನಸೇವೆ ಜನಾರ್ಧನ ಸೇವೆ ಎಂದು ತಿಳಿದುಕೊಂಡಿರುವ ವಿನೋದ ಅಸೂಟಿ, ಅಖಂಡ ಧಾರವಾಡ ಜಿಲ್ಲೆಯಿಂದ ಹೊರಡುವ ಕಾಂಗ್ರೇಸ್ ಕಾರ್ಯಕರ್ತರಿಗೆ ಸ್ವಂತ ದುಡ್ಡಿನಿಂದ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.
ನಾಳೆ ಬೆಳಿಗ್ಗೆ 8 ರಿಂದ 12 ಘಂಟೆಯ ವರೆಗೆ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಪಾರ್ಸಲ್ ಪೊಟ್ಟಣಗಳನ್ನು ಮಾಡಿದ್ದಾರೆ. ಅಲ್ಲದೇ ಅದರ ಜೊತೆ ಒಂದು ನೀರಿನ ಬಾಟಲನ್ನು ಕೊಡಲಾಗುತ್ತಿದೆ.
ಬೆಳಗಾವಿ ಕಾರ್ಯಕ್ರಮಕ್ಕೆ ಹೋಗುವವರು ಮುಲ್ಲಾ ದಾಬಾಕ್ಕೆ ಬಂದು ಉಪಹಾರದ ಪೊಟ್ಟಣ ಪಡೆದು ಹೋಗುವಂತೆ ವಿನೋದ ಅಸೂಟಿಯವರ ಅಭಿಮಾನಿಗಳು ವಿನಂತಿಸಿದ್ದಾರೆ.
