ಧಾರವಾಡ ನಗರದ ಪ್ರತಿಭಾವಂತ ವಿದ್ಯಾರ್ಥಿನಿ ಆರತಿ ನಾಯ್ಕರ್ ಇನ್ಸಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಧಾರವಾಡಕ್ಕೆ ಕೀರ್ತಿ ತಂದಿದ್ದಾಳೆ.
ಆರತಿ ನಾಯ್ಕರ್ ಅವರ ತಂದೆ ಫಕ್ಕೀರಪ್ಪ ನಾಯ್ಕರ್ ಭಾರತೀಯ ಸೇನೆಯಲ್ಲಿ ೧೭ ವರ್ಷ ಸೇವೆ ಸಲ್ಲಿಸಿದ್ದಾರೆ. ಅವರು ಇದೀಗ ಹು-ಧಾ ಕಮೀಶ್ನರೇಟ್‌ನಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ರಿ ಆರತಿ ಹಾಗೂ ಪುತ್ರ ವಿನಾಯಕ ಇಬ್ಬರೂ ಸಿಎ ಉತ್ತೀರ್ಣರಾಗಿದ್ದು ಹೆಮ್ಮೆ ಎನಿಸುತ್ತಿದೆ ಎಂದು ಪೋಷಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಆರತಿ ನಗರದ ಪ್ರಜೆಂಟೇಶನ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯುಸಿ, ಹಾಗೂ ಸಿಎಸ್‌ಐ ಕಾಲೇಜಿನಲ್ಲಿ ಬಿಕಾಂ ಶಿಕ್ಷಣವನ್ನು ಪೂರೈಸಿದ್ದು, ಈ ಸಾಧನೆಗೆ ಪ್ರೋತ್ಸಾಹಿಸಿದ ಪೋಷಕರು, ಶಿಕ್ಷಕರು, ಪ್ರಾಧ್ಯಾಪಕರನ್ನು ಆರತಿ ಸ್ಮರಿಸಿದ್ದಾರೆ.
