ಸಂಗೀತ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಧಾರವಾಡಕ್ಕೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಧಾರವಾಡ ಇದೀಗ ನಿವೃತ್ತರ ಸ್ವರ್ಗ ಎಂದು ಹೆಸರು ಪಡೆದಿದೆ.
ಹುಬ್ಬಳ್ಳಿ ನಗರಕ್ಕೆ ಹೋಲಿಸಿದಾಗ ಧಾರವಾಡ ನಗರದ ಪರಿಸರ ತುಂಬಾ ವಿಭಿನ್ನ. ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡ ಜನರನ್ನು ಹೆಚ್ಚು ಆಕರ್ಷಿಸುತ್ತದೆ.
ಕಾನೂನು ಸುವ್ಯವಸ್ಥೆ ಬಗ್ಗೆ ಹೇಳುವದಾದರೆ, ಧಾರವಾಡದಲ್ಲಿ ಸುರಕ್ಷಿತ ಸೂಚ್ಯಂಕ ಶೇಕಡಾ 81.25 ರಷ್ಟಿದೆ. ಇಲ್ಲಿ ಮತೀಯ ಘರ್ಷಣೆಯಾಗಲಿ, ದ್ವೇಷ ಅಸೂಯೆ ಅಷ್ಟೊಂದು ಕಾಣಿಸುವದಿಲ್ಲ.
ಇನ್ನು ಧಾರವಾಡದ ಅಪರಾಧ ಸೂಚ್ಯಂಕ ನೋಡುವದಾದರೆ, ಧಾರವಾಡದ ಅಪರಾಧ ಸೂಚ್ಯಂಕ ಶೇಕಡಾ 18.75 ರಷ್ಟಿದೆ ಅನ್ನೋದು ಧಾಖಲೆಗಳಿಂದ ಗೊತ್ತಾಗುತ್ತದೆ.
ಧಾರವಾಡ ಎಷ್ಟು ಸುರಕ್ಷತೆ ಇದೆ ಅನ್ನೋದನ್ನ ಹೇಳುವದಾದರೆ, ಧಾರವಾಡದಲ್ಲಿ ಹಗಲು ಹೊತ್ತಿನಲ್ಲಿ ಶೇಕಡಾ 81.25 ರಷ್ಟು ಜನ ಏಕಾಂಗಿಯಾಗಿ ಸುರಕ್ಷಿತವಾಗಿ ನಡೆದು ಹೋಗಬಲ್ಲರು.
ಅದೇ ರಾತ್ರಿ ಹೊತ್ತಿನಲ್ಲಿ ಶೇಕಡಾ 68.75 ಜನ ಸುರಕ್ಷಿತವಾಗಿ ನಡೆದು ಹೋಗಬಲ್ಲರು ಎಂದು ವರದಿಯೊಂದು ಹೇಳುತ್ತದೆ.
ಹಾಗಂತ ಧಾರವಾಡದಲ್ಲಿ ಯಾವದೇ ಅಪರಾಧಗಳು ನಡೆಯುವದಿಲ್ಲ ಅಂತಲ್ಲ. ಧಾರವಾಡದಲ್ಲಿ ಅಪರಾಧದ ಮಟ್ಟ ಕಡಿಮೆ ಇದೆ. ಧಾರವಾಡದ ಅಪರಾಧದ ಮಟ್ಟ ಶೇಕಡಾ 25 ರಷ್ಟಿದೆ. ಅಷ್ಟರ ಮಟ್ಟಿಗೆ ಧಾರವಾಡ ಸುರಕ್ಷತೆ ದೃಷ್ಟಿಯಿಂದ ಮುಂದುವರೆಯುತ್ತಿದೆ.
ಕಳೆದ 5 ವರ್ಷಗಳ ಹಿಂದೆ ಧಾರವಾಡದ ಅಪರಾಧ ಮಟ್ಟ ಶೇಕಡಾ 37.50 ರಷ್ಟಿತ್ತು. ಅದು ಈಗ ಕ್ರಮೇಣ ಕಡಿಮೆಯಾಗುತ್ತ ಬಂದಿದೆ.
ಮನೆ ಮುರಿದು ಕಳ್ಳತನ ಮಾಡಿದ ಪ್ರಕರಣಗಳನ್ನು ನೋದುವದಾದರೆ ಇಂತಹ ಶೇಕಡಾ 25 ರಷ್ಟು ಕಳ್ಳತನ ಪ್ರಕರಣಗಳು ನಡೆದಿವೆ. ಒಟ್ಟಾರೆ ಹೇಳುವದಾದರೆ, ಕೆಲ ಸಣ್ಣ ಪುಟ್ಟ ರಾಜಕೀಯ ಪುಡಾರಿಗಳ ಪುಂಡಾಟವನ್ನು ಹೊರತುಪಡಿಸಿದರೆ, ಧಾರವಾಡ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸುರಕ್ಷಿತ ನಗರ ಎಂದು ಕರೆಯಬಹುದಾಗಿದೆ.
ಮಾದಕ ದೃವ್ಯ ಸೇವನೆ ಮತ್ತು ಮಾರಾಟ ಮಾಡುವವರ ಮೇಲೆ ನಿರ್ಧಾಕ್ಷಿಣ ಕ್ರಮ ಕೈಗೊಂಡಿರುವ ಅವಳಿ ನಗರದ ಪೊಲೀಸ ಇಲಾಖೆ, ಆ ಮಾಫಿಯಾ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಬೇಕಾಗಿದೆ.
