ಕಾರ್ಮಿಕ ಸಚಿವ ಸಂತೋಷ ಲಾಡ್, ಆಟೋ ಚಾಲಕರು ಸೇರಿದಂತೆ ವಾಣಿಜ್ಯ ಸಾರಿಗೆ ಚಾಲಕರ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ.
ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸುವ ಚಾಲಕರ ಸ್ವಾವಲಂಭಿ ಬದುಕಿಗೆ ಸಂತೋಷ ಲಾಡ್ ಹೊಸ ಯೋಜನೆ ಜಾರಿಗೆ ತಂದಿದ್ದಾರೆ.
ಸಂತೋಷ ಲಾಡ್ ರ ಕನಸಿನ ಯೋಜನೆಯಾದ “ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ” ಯೋಜನೆ ಜಾರಿಗೆ ತರಲಾಗಿದೆ.
ಈ ಯೋಜನೆಯನ್ನು ಎಲ್ಲಾ ಅರ್ಹ ಚಾಲಕರು ಪಡೆದುಕೊಳ್ಳುವಂತೆ ಸಚಿವ ಸಂತೋಷ ಲಾಡ್ ಅವರು ಮನವಿ ಮಾಡಿದ್ದಾರೆ.
