ಧಾರವಾಡ ಜಿಲ್ಲೆಯ ಆರ್ ಎಸ್ ಎಸ್ ಪಡಸಾಲೆಯಲ್ಲಿ ಸದ್ದಿಲ್ಲದೇ ಕೆಲವು ರಾಜಕೀಯ ಚರ್ಚೆಗಳು ನಡೆದಿವೆ.
ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ಕಠಿಣ ಸ್ಪರ್ಧೆಯೊಡ್ಡಿದ್ದ ವಿನೋದ ಅಸೂಟಿ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಮುಂದೊಂದು ದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲವಾದ ಸೆಡ್ಡು ಹೊಡೆಯುವ ಶಕ್ತಿ, ಅಹಿಂದ ನಾಯಕನಾಗಿ ಗುರುತಿಸಿಕೊಂಡಿರುವ ವಿನೋದ ಅಸೂಟಿಗೆ ಬರಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿರುವ ಸಂಘದ ಕೆಲವು ಮುಖಂಡರು, ವಿನೋದ ಅಸೂಟಿಯವರನ್ನು ಬಿಜೆಪಿಗೆ ಸೆಳೆಯಲು ಯೋಚಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರವನ್ನು ಸಂಘದ ಪ್ರಮುಖರು, ನವಲಗುಂದ ಕ್ಷೇತ್ರದ ಆರ್ ಎಸ್ ಎಸ್ ಕಾರ್ಯಕರ್ತರ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ವಿನೋದ ಅಸೂಟಿಯವರಿಗೆ ಕಡೆ ಕ್ಷಣದಲ್ಲಿ ಕಾಂಗ್ರೇಸ್ ಲೋಕಸಭಾ ಟಿಕೇಟ್ ಘೋಷಣೆಯಾದರು, ಅತ್ಯಂತ ಕಠಿಣ ಸ್ಪರ್ಧೆ ಒಡ್ಡಿದ್ದರಿಂದ, ಜೋಶಿಯವರ ಗೆಲುವು ಈ ಸಲ ಅಷ್ಟು ಸುಲಭವಾಗಿರಲಿಲ್ಲ. ವಿನೋದ ಅಸೂಟಿಯವರನ್ನು ಬಿಜೆಪಿಗೆ ಕರೆತಂದು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಬಗ್ಗೆ ಯೋಚಿಸಲಾಗಿದೆ ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಘದ ಸಭೆಯಲ್ಲಿ ವಿನೋದ ಅಸೂಟಿ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಆದರೆ ವಿನೋದ ಅಸೂಟಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಕೂಡಾ ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ.