ಬೆಂಗಳೂರು ಹೊರತುಪಡಿಸಿದ್ರೆ, ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಅತೀ ದೊಡ್ಡ ನಗರಗಳಾಗಿವೆ. ನಗರಗಳು ವಿಸ್ತಾರಗೊಳ್ಳುತ್ತಿದ್ದಂತೆ ಸಹಜವಾಗಿ ಕ್ರೈಮ್ ಚಟುವಟಿಕೆಗಳು ಸ್ವಲ್ಪ ಜಾಸ್ತಿ ಇರುತ್ತವೆ.
2024 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಕೊಲೆ ಪ್ರಕರಣಗಳು, ದೇಶದಲ್ಲಿ ದೊಡ್ಡ ಸುದ್ದಿ ಮಾಡಿದ್ದವು.
ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಿರೋದ ಪಕ್ಷಗಳು ಅಬ್ಬರಿಸಿದ್ದವು.
ಇಂತಹ ಹೊತ್ತಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಕಠಿಣ ಕ್ರಮಕೈಗೊಳ್ಳುವದು ಅವಶ್ಯ ಎನಿಸಿತ್ತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ಗೆ ಆಯುಕ್ತರಾಗಿ ಬಂದ ಶಶಿಕುಮಾರ, ಪೊಲೀಸರ ಬಂದೂಕಿಗೆ ಕೆಲಸ ಕೊಟ್ಟರು.
ಮಾದಕ ವ್ಯಸನಿಗಳನ್ನು, ಮತ್ತು ಅದನ್ನು ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ಗಳನ್ನು ಬಂಧಿಸಿದ್ದ ಶಶಿಕುಮಾರ ಅವರು, ನಂತರ ರೌಡಿ ಶೀಟರ್ ಗಳ ಪರೇಡ್ ನಡೆಸಿ, ಬಾಲ ಬಿಚ್ಚದಂತೆ ಎಚ್ಚರಿಕೆ ಕೊಟ್ಟರು.
ಅಲ್ಲಿಂದ ಶುರುವಾಯ್ತು ನೋಡಿ ಫೈರಿಂಗ್
ಪೊಲೀಸ್ ಇಲಾಖೆಗೆ ಸವಾಲೆಸೆದು ಕ್ರೈಮ್ ಚಟುವಟಿಕೆಯಲ್ಲಿ ಭಾಗವಹಿಸಿದ್ದವರ ಮೇಲೆ ಇಲ್ಲಿಯವರೆಗೆ ಒಟ್ಟು ಹದಿಮೂರು ಫೈರಿಂಗ್ ಗಳನ್ನು ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸರ ಬಂದೂಕು ಮಾತನಾಡತೊಡಗಿದ ಮೇಲೆ ಕ್ರೈಮ್ ಚಟುವಟಿಕೆಗಳು ನಿಯಂತ್ರಣದಲ್ಲಿವೆ.
ಪೊಲೀಸ್ ಆಯುಕ್ತ ಶಶಿಕುಮಾರ, ಡಿ ಸಿ ಪಿ ಗಳಾದ ರವೀಶ್ ಚಿಕ್ಕನಾಯಕನಹಳ್ಳಿ ಹಾಗೂ ಮಹಾನಿಂಗ ನಂದಗಾವಿಯವರು ಹುಬ್ಬಳ್ಳಿ ಧಾರವಾಡದ ಜನ ನೆಮ್ಮದಿಯಿಂದ ಇರಲು ಕಾರಣಿಕರ್ತರಾಗಿದ್ದಾರೆ.
