ಧಾರವಾಡ ಜಿಲ್ಲೆಯ ಕಾಂಗ್ರೇಸ್ ನಲ್ಲಿರುವ ಮುಸ್ಲಿಮ್ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಸೆಂಟ್ರಲ್, ಹಾಗೂ ಕುಂದಗೋಳ ಹೊರತುಪಡಿಸಿದ್ರೆ, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವಿಗೆ ಮುಸ್ಲಿಮ್ ಸಮಾಜ ಕಾರಣವಾಗಿದೆ.
ಸಮಾಜದ ಮೇಲೆ ಹಿಡಿತ ಹೊಂದಿರುವ, ಹುಬ್ಬಳ್ಳಿಯ ಮಾಜಿ ಸಚಿವ ಎ ಎಮ್ ಹಿಂಡಸಗೇರಿ ಹಾಗೂ ಧಾರವಾಡದ ಇಸ್ಮಾಯಿಲ್ ತಮಟಗಾರರನ್ನು, ಕಾಂಗ್ರೇಸ್ ಪಕ್ಷ ಇಷ್ಟೊತ್ತಿಗೆ ಗುರುತಿಸಬೇಕಿತ್ತು. ಕನಿಷ್ಟ ಒಬ್ಬರನ್ನು ವಿಧಾನ ಪರಿಷತ್ ಗೆ ಹಾಗೂ ಮತ್ತೊಬ್ಬರನ್ನು ಪ್ರಮುಖ ನಿಗಮ ಮಂಡಳಿಗೆ ನೇಮಕ ಮಾಡಬೇಕಿತ್ತು.
ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಅಂಜುಮನ್ ಸಂಸ್ಥೆಯಾಗಿರುವ ಹುಬ್ಬಳ್ಳಿ ಅಂಜುಮನ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವರಾದ ಎ ಎಮ್ ಹಿಂಡಸಗೇರಿ ಹಾಗೂ ಧಾರವಾಡ ಅಂಜುಮನ್ ಇಸ್ಲಾಮ್ ಸಂಸ್ಥೆ ಅಧ್ಯಕ್ಷರಾಗಿರುವ ಇಸ್ಮಾಯಿಲ್ ತಮಟಗಾರರನ್ನು ರಾಜಕೀಯವಾಗಿ ತುಳಿಯುವ ಕೆಲಸ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ತಿಂಗಳು ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳು, ಖಾಲಿಯಾಗಲಿದ್ದು, 24 ಜನ ಆಕಾಂಕ್ಷಿಗಳು, ತಮ್ಮ ತಮ್ಮ ನಾಯಕರಿಗೆ ಬೆನ್ನು ಬಿದ್ದು, ಪ್ರಭಾವ ಬೀರುತ್ತಿದ್ದಾರೆ.
ಕಾಂಗ್ರೇಸ್ಸಿಗೆ ಶಕ್ತಿ ತುಂಬಿರುವ ಮುಸ್ಲಿಮ್ ಸಮುದಾಯಕ್ಕೆ ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಪ್ರಾತಿನಿದ್ಯ ಕೊಡದೆ ಹೋದಲ್ಲಿ, ಚುನಾವಣೆ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಮತಗಳು ಕೈಕೊಡುವ ಲಕ್ಷಣಗಳು ಗೋಚರಿಸುತ್ತಿವೆ.
ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಮ್ ನಾಯಕರನ್ನು ರಾಜಕೀಯವಾಗಿ ತುಳಿಯುತ್ತಿರುವವರ ವಿರುದ್ಧ, ಸಮುದಾಯದ ಜನ ಎಚ್ಚರಗೊಂಡಿದ್ದಾರೆ.
ಮುಂದಿನ ತಿಂಗಳು ವಿಧಾನ ಪರಿಷತ್ ಗೆ ನಾಲ್ಕು ಸ್ಥಾನಗಳನ್ನು ನೇಮಕ ಮಾಡುವಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಧಾರವಾಡ ಜಿಲ್ಲೆಯ ಮುಸ್ಲಿಮ್ ನಾಯಕರನ್ನು ಪರಿಗಣಿಸುವಂತೆ ಬೇಡಿಕೆ ಇಟ್ಟಿದ್ದಾರೆ.
