ಬಹುದಿನದ ಬೇಡಿಕೆಯಾಗಿದ್ದ ಧಾರವಾಡ ಪ್ರತ್ತೈಕ ಪಾಲಿಕೆಗೆ ಕಡೆಗೂ ಮುಹೂರ್ತ ಕೂಡಿ ಬಂದಿದೆ. ಕೆಲವೇ ಕ್ಷಣಗಳಲ್ಲಿ ಕ್ಯಾಬಿನೆಟ್ ತೀರ್ಮಾನ ಹೊರಬೀಳಲಿದೆ.
ದಶಕಗಳ ಕನಸು ಕಡೆಗೂ ನನಸಾಗುತ್ತಿದ್ದು, ಧಾರವಾಡ ಐತಿಹಾಸಿಕ ಘಟನೆಗೆ ಇಂದು ಸಾಕ್ಷಿಯಾಗಲಿದೆ.
ಶಾಸಕ ವಿನಯ ಕುಲಕರ್ಣಿ ನೇತೃತ್ವದ ನಿಯೋಗ ಧಾರವಾಡ ಪ್ರತ್ತೈಕ ಪಾಲಿಕೆ ಘೋಷಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇವರ ಜೊತೆಗೆ ಶಾಸಕ ಅರವಿಂದ ಬೆಲ್ಲದ ಸಹ ಧಾರವಾಡ ಪ್ರತ್ತೈಕ ಪಾಲಿಕೆ ಪರ ಬೇಡಿಕೆ ಮಂದಿಟ್ಟಿದ್ದರು.
ಇಂದು ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ನಲ್ಲಿ ಧಾರವಾಡ ಪ್ರತ್ತೈಕ ಪಾಲಿಕೆಯ ಘೋಷಣೆಯಾಗುತ್ತಿದ್ದು, ಹೋರಾಟಗಾರರು ವಿಜಯೋತ್ಸವ ಆಚರಣೆಗೆ ಸಜ್ಜಾಗಿದ್ದಾರೆ.
