ನೌಕರಿ ಮಾಡುವ ಕನಸು ಕಾಣುತ್ತಿರುವ ಕನ್ನಡದ ಮಕ್ಕಳಿಗೆ, ಪರ ರಾಜ್ಯದವರು ಕನ್ನ್ ಹಾಕಿರುವ ಸ್ಪೋಟಕ ಮಾಹಿತಿ ಕರ್ನಾಟಕ ಫೈಲ್ಸ್ ಇಂದು ಧಾಖಲೆ ಸಮೇತ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದೆ.
ದುಡ್ಡು ಕೊಟ್ಟರೆ ಧಾರವಾಡದ ಸರ್ಕಾರಿ ಕಚೇರಿಗಳಲ್ಲಿ ಬೇಕಾದ್ದು ಸಿಗತೈತಿ ಅನ್ನೋದನ್ನ ಇವತ್ತು ಸಾಕ್ಷಿ ಸಮೇತ ವರದಿ ಮಾಡುತ್ತಿದ್ದೇವೆ.
ಅಂದ ಹಾಗೇ ಪರ ರಾಜ್ಯದಲ್ಲಿ PUC ವರೆಗೆ ಓದಿದ ವಿಧ್ಯಾರ್ಥಿಗಳು, ಕರ್ನಾಟಕದ ಕೋಟಾದಲ್ಲಿ ನೌಕರಿ ಗಿಟ್ಟಿಸಲು ಧಾರವಾಡ ತಹಸೀಲ್ದಾರ್ ಕಚೇರಿಯಿಂದ ರಹವಾಸಿ ಪ್ರಮಾಣ ಪತ್ರ ಪಡೆದಿದ್ದು, ಕನ್ನಡಿಗ ವಿಧ್ಯಾರ್ಥಿಗಳಿಗೆ ಮೋಸ ಮಾಡಿದ್ದಾರೆ.
ಅಮಿತ್ ಯಾದವ ಎಂಬ ಉತ್ತರ ಪ್ರದೇಶದ , ವಾರಣಾಸಿ ಬಳಿರುವ ಜಲಹುಪುರದ SKBIC ಸಂಸ್ಥೆಯಲ್ಲಿ 2015 ರಲ್ಲಿ ಮಾಧ್ಯಮ ಶಿಕ್ಷಣ ಪಡೆದಿದ್ದು, ಈತನಿಗೆ ಧಾರವಾಡದ ರಹವಾಸಿ ಪ್ರಮಾಣ ಪತ್ರ ನೀಡಲಾಗಿದೆ.
ಉತ್ತರ ಪ್ರದೇಶದ ವಿಧ್ಯಾರ್ಥಿ ಅಮಿತ್ ಯಾದವನಿಗೆ 24-01-2024 ರಲ್ಲಿ ಧಾರವಾಡದ ನವಲೂರು ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಾನೆ ಎಂದು ಹೇಳಿ ಆಗಿನ ಉಪ ತಹಸೀಲ್ದಾರ ವಿದ್ಯಾ ಪ್ರಕಾಶ ದಿಸಲೇ ಆತನಿಗೆ ರಹವಾಸಿ ಪ್ರಮಾಣ ಪತ್ರ ನೀಡಿದ್ದಾರೆ.
ಇವೆಲ್ಲ ಧಾಖಲೆಗಳು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ. ಹೇಗೆ ಕನ್ನಡಿಗರನ್ನು ನೌಕರಿಯಲ್ಲಿ ಪರ ರಾಜ್ಯದವರು ವಂಚಿಸುತ್ತಾರೆ. ಯಾವೆಲ್ಲ ನೌಕರಿ ಎಷ್ಟು ಜನ ಗಿಟ್ಟಿಸಿದ್ದಾರೆ ಅನ್ನೋದನ್ನ ಕರ್ನಾಟಕ ಫೈಲ್ಸ್ ಸ್ಪೋಟಕ ಮಾಹಿತಿಯನ್ನು ಹೊರಹಾಕಲಿದೆ.