ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ಘೋಷಣೆ ಮಾಡುವ ಮೂಲಕ ಹೊಸ ವರ್ಷದ ಕೊಡುಗೆ ಕೊಟ್ಟಿದೆ.
ನಾಳೆಯೇ ಮೇಯರ ಇಲೆಕ್ಷನ್ ನಡೆದರು, ನೂತನವಾಗಿ ರಚಿತಗೊಂಡಿರುವ ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಲಿದೆ. ಧಾರವಾಡದ ನೂತನ ಪಾಲಿಕೆಗೆ ಬಿಜೆಪಿಯ ಮೊದಲ ಮೇಯರ್ ಎಂಬ ಹೆಗ್ಗಳಿಕೆ ಬಿಜೆಪಿಯದ್ದಾಗುತ್ತದೆ.
1 ರಿಂದ 26 ವಾರ್ಡಗಳು ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ. 26 ಪಾಲಿಕೆ ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ ನೋಡುವದಾದರೆ,
ಬಿಜೆಪಿಯ 14, ಜೆಡಿಎಸ್ 1 ಹಾಗೂ ಕಾಂಗ್ರೇಸ್ಸಿನ 11 ಪಾಲಿಕೆ ಸದಸ್ಯರಿದ್ದಾರೆ. ಮೇಯರ ಆಯ್ಕೆ ಸಂದರ್ಭದಲ್ಲಿ ಶಾಸಕರು ಹಾಗೂ ಸಂಸದರಿಗೂ ಮತ ಹಾಕುವ ಅಧಿಕಾರವಿದೆ.
14 ಪಾಲಿಕೆ ಇರುವ ಬಿಜೆಪಿಗೆ ಶಾಸಕ ಅರವಿಂದ ಬೆಲ್ಲದ, ಮತ್ತು ಸಂಸದ ಪ್ರಲ್ಲಾದ ಜೋಶಿಯವರ ಮತ ಸೇರಿ ಬಿಜೆಪಿಗೆ 16 ಸಂಖ್ಯೆಯ ಬಲ ಇದೆ.
11 ಪಾಲಿಕೆ ಸದಸ್ಯರನ್ನು ಹೊಂದಿರುವ ಕಾಂಗ್ರೇಸ್ಸಿಗೆ ಜೆಡಿಎಸ್ ಸದಸ್ಯರ ಬೆಂಬಲ ಸಿಕ್ಕು, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಮತ ಸೇರಿಸಿದರೆ, ಕಾಂಗ್ರೇಸ್ಸಿಗೆ 13 ಮತಗಳ ಸಂಖ್ಯಾಬಲ ಇದೆ.
ಈ ಲೆಕ್ಕಾಚಾರದಲ್ಲಿ ನೋಡಿದಾಗ, ನಾಳೆಯೇ ಧಾರವಾಡ ಮಹಾನಗರ ಪಾಲಿಕೆಯ ಮೇಯರ ಸ್ಥಾನಕ್ಕೆ ಚುನಾವಣೆ ನಡೆದರೆ, ಬಿಜೆಪಿಗೆ ಮೇಯರ ಸ್ಥಾನ ಸುಲಭವಾಗಿ ಸಿಗಲಿದೆ.