ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ, ಧಾರವಾಡದ ಜನರ ಬಹುದಿನದ ಬೇಡಿಕೆಯಾದ ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ಘೋಷಿಸಿದೆ.
ಆದರೆ ಧಾರವಾಡ ಮಹಾನಗರ ಪಾಲಿಕೆ ಪರಿಪೂರ್ಣವಾಗಿ ಆಸ್ತಿತ್ವಕ್ಕೆ ಬರಲು ಕನಿಷ್ಟವೆಂದರು ಎರಡು ವರ್ಷಗಳು ಬೇಕಾಗುತ್ತವೆ.
ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದ ನಂತರ ಆಡಳಿತಕ್ಕೆ ಅಗತ್ಯ ವ್ಯವಸ್ಥೆ, ಸಿಬ್ಬಂದಿ ನೇಮಕಾತಿ ನಡೆಸಬೇಕು.
ನಗರಾಭಿವೃದ್ದಿ ಇಲಾಖೆ ಸುತ್ತೋಲೆ ಹೊರಡಿಸಿದ ಬಳಿಕ ಅದಕ್ಕೆ ಆಡಳಿತಾತ್ಮಕ ಅನುಮೋದನೆ ಜೊತೆಗೆ ಆರ್ಥಿಕ ಇಲಾಖೆ ನೂತನವಾಗಿ ರಚನೆಗೊಂಡಿರುವ ಪಾಲಿಕೆಗೆ ಅಗತ್ಯ ಅನುದಾನ ಮಂಜೂರು ಮಾಡಬೇಕು.
ಇವೆಲ್ಲವೂ ಮುಗಿಯಲು ಸಾಕಷ್ಟು ಸಮಯ ಬೇಕಿರುವದರಿಂದ, ಧಾರವಾಡ ಮಹಾನಗರ ಪಾಲಿಕೆ ಪೂರ್ಣವಾಗಿ ಆಸ್ತಿತ್ವಕ್ಕೆ ಬರಲು ಎರಡು ವರ್ಷ ಕಾಯಲೇಬೇಕಾಗಿದೆ.