ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಕಡೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡ ನಗರವನ್ನು ಪ್ರತ್ತೈಕಿಸಿ, ಧಾರವಾಡ ಪ್ರತ್ತೈಕ ಪಾಲಿಕೆಯನ್ನಾಗಿ ಘೋಷಿಸಿದೆ.
ಧಾರವಾಡಿಗರ ಬಹುದಿನಗಳ ಬೇಡಿಕೆಯನ್ನು ಕಾಂಗ್ರೇಸ್ ಸರ್ಕಾರ ಕಡೆಗೂ ಈಡೇರಿಸಿದೆ. ಪ್ರತ್ತೈಕ ಪಾಲಿಕೆಗಾಗಿ ಪಕ್ಷಾತೀತವಾಗಿ ನಡೆದ ಹೋರಾಟ ಫಲ ಕೊಟ್ಟಿದೆ.
ಧಾರವಾಡ ಪ್ರತ್ತೈಕ ಪಾಲಿಕೆ ವ್ಯಾಪ್ತಿಗೆ 1 ರಿಂದ 26 ವಾರ್ಡಗಳು ಬರಲಿದ್ದು, ನವನಗರದಿಂದ ಧಾರವಾಡ ಪ್ರತ್ತೈಕ ಪಾಲಿಕೆಯ ವ್ಯಾಪ್ತಿ ಆರಂಭವಾಗಲಿದೆ.
ಧಾರವಾಡಕ್ಕೆ ಸಮೀಪ ಇರುವ ಈ ಹಳ್ಳಿಗಳು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ
ಮಮ್ಮಿಗಟ್ಟಿ, ಸಲಕಿನಕೊಪ್ಪ, ಯರಿಕೊಪ್ಪ, ಜೋಗೆಲ್ಲಾಪುರ ಗ್ರಾಮಗಳು ಸಂಪೂರ್ಣವಾಗಿ ಪಾಲಿಕೆ ವ್ಯಾಪ್ತಿಗೆ ಬರಲಿವೆ ಎನ್ನಲಾಗಿದೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯನ್ನು ತೇಗುರವರೆಗೆ ವಿಸ್ತರಿಸಿಕೊಂಡಿದ್ದು, ಅಲ್ಲಿನ ಪ್ರದೇಶಗಳು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬಂದಿವೆ.
ಪ್ರತ್ತೈಕ ಪಾಲಿಕೆ ಹೋರಾಟಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಲು, ಪಕ್ಷಾತೀತವಾಗಿ ಜನಪ್ರತಿನಿದಿಗಳು ಒಂದಾಗಿದ್ದು, ಒಳ್ಳೆಯ ಬೆಳವಣಿಗೆಯಾಗಿದೆ.