ನವಲಗುಂದ ತಾಲೂಕಿನ ಯುವ ಮುಖಂಡ ಹಾಗೂ ಶಾಸಕ ಎನ್ ಎಚ್ ಕೋನರೆಡ್ಡಿಯವರ ಆಪ್ತ ಮಂಜು ಬಾಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶಾಸಕ ಎನ್ ಎಚ್ ಕೋನರೆಡ್ಡಿಯವರ ಜೊತೆ ಗುರುತಿಸಿಕೊಂಡಿದ್ದ ಮಂಜು ಬಾಳಿ, ಜೆಡಿಎಸ್ ನಿಂದಲೂ ಶಾಸಕ ಕೋನರೆಡ್ಡಿಯವರ ಜೊತೆ ಗುರುತಿಸಿಕೊಂಡಿದ್ದರು.
ಇಂದು ಮಂಜು ಬಾಳಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಮತ್ತಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.