ಧಾರವಾಡ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ ಪಡೆದ ದಿವ್ಯ ಪ್ರಭುರಂತಹ ಉತ್ತಮ ಜಿಲ್ಲಾಧಿಕಾರಿಗಳು ಬಂದರು, ಧಾರವಾಡ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮಾತ್ರ ನಮಗೂ ಅವರಿಗೂ ಸಂಬಂಧವೆ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಯಾವದೇ ರಾಜ್ಯದವರು ಇರಲಿ, ಇಲ್ಲಿ ಸುಲಭವಾಗಿ ಕರ್ನಾಟಕದವರು, ಅದರಲ್ಲೂ ಪ್ರಮುಖವಾಗಿ ಧಾರವಾಡದವರು ಅನ್ನೋ ನಿವಾಸಿ ( domicial ) ಪ್ರಮಾಣ ಪತ್ರ ಧಾರವಾಡ ತಹಸೀಲ್ದಾರ ಕಚೇರಿಯಲ್ಲಿ ಸಿಗುತ್ತದೆ.
ಇಂತಹ 170 ಕ್ಕೂ ಹೆಚ್ಚು ನಿವಾಸಿ (domicial ) ಪ್ರಮಾಣ ಪತ್ರ ಕೊಟ್ಟಿರುವ ಧಾಖಲೆಗಳು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ.
ಪರ ರಾಜ್ಯದ ವಿಧ್ಯಾರ್ಥಿಗಳು, ಇಲ್ಲಿ ಸ್ಥಳೀಯ ನಿವಾಸಿಗಳೆಂದು ಹೇಳಿ, ಪ್ರಮಾಣ ಪತ್ರ ಪಡೆದು, ಕರ್ನಾಟಕದ ಕೋಟಾದಲ್ಲಿ ಕೇಂದ್ರ ಸರ್ಕಾರದ ನೌಕರಿ ಪಡೆಯುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇಂತಹ ಭೋಗಸ ಪ್ರಮಾಣ ಪತ್ರ ಕೊಡುವವರು ಧಾರವಾಡದ ತಹಸೀಲ್ದಾರ ಕಚೇರಿಯಲ್ಲಿದ್ದು, ಕನ್ನಡ ಅನ್ನ ತಿಂದು, ಕನ್ನಡಿಗರಿಗೆ ದ್ರೋಹ ಬಗೆಯುತ್ತಿದ್ದಾರೆ.
ಕರ್ನಾಟಕ ಫೈಲ್ಸ್ ಆ ದುರುಳರನ್ನು ಬೆನ್ನು ಬಿದ್ದಿದ್ದು ಮತ್ತಷ್ಟು ಸ್ಪೋಟಕ ಮಾಹಿತಿ ಧಾಖಲೆಯೊಂದಿಗೆ ಹೊರಹಾಕಲಿದೆ.