ಹುಬ್ಬಳ್ಳಿಯಲ್ಲಿ ನಡೆದ 8 ಜನ ಅಯ್ಯಪ್ಪ ಮಾಲಾಧಾರಿಗಳ ಘೋರ ದುರಂತದ ಹಿಂದೆ ಪಾಲಿಕೆಯ ನಿರ್ಲಕ್ಷ ಕಂಡು ಬಂದಿದೆ.
ಅಂದು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಯ್ಯಪ್ಪ ಸನ್ನಿಧಿಯನ್ನು ತೆರವುಗೊಳಿಸುವಂತೆ ಅಶೋಕ ಚಿಲ್ಲಣ್ಣವರ ಪಾಲಿಕೆಗೆ ಪತ್ರ ಬರೆದಿದ್ದರು.
28-10-2022 ರಂದು ಅಶೋಕ ಚಿಲ್ಲಣ್ಣವರ ಬರೆದ ಪತ್ರದಲ್ಲಿ ಸರ್ವೇ ನಂಬರ 199 ಪ್ಲಾಟ ನಂಬರ 29 ನ ಪೂರ್ವ ಭಾಗದ ರಸ್ತೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗಿದೆ ಎಂದು ಆಯುಕ್ತರಿಗೆ ತಿಳಿಸಿದ್ದರು.
ಆದರೆ ಪಾಲಿಕೆಯ ಕಮಿಷನರ್ ನಿರ್ಲಕ್ಷ ವಹಿಸಿದ್ದರಿಂದ ಈ ಅವಘಡ ನಡೆದಿದೆ ಎಂದು ಕಾಂಗ್ರೇಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.