ಬಸ್ಸಿನ ದರ್ ಏರಿಕೆಯಾದ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿರೋದ ಪಕ್ಷಗಳ ನಡುವೆ ವಾಕ್ಸಮರ ನಡೆದಿದೆ.
ಹುಬ್ಬಳ್ಳಿಯಿಂದ ಬೇರೆ ಬೇರೆ ಭಾಗಗಳಿಗೆ ಹೊರಡುವ ಬಸ್ಸಿನ ದರ ಇಂತಿದೆ.
ಹುಬ್ಬಳ್ಳಿಯಿಂದ ನವಲಗುಂದಕ್ಕೆ ಈಗಿದ್ದ 45 ರೂಪಾಯಿಯಿಂದ 53 ರೂಪಾಯಿಗೆ ಏರಿಕೆಯಾಗಿದೆ.
ಹುಬ್ಬಳ್ಳಿಯಿಂದ ಕುಂದಗೋಳಕ್ಕೆ 37 ರೂಪಾಯಿ ನಿಗದಿ ಮಾಡಲಾಗಿದೆ. ಹುಬ್ಬಳ್ಳಿಯಿಂದ ಕಲಘಟಗಿಗೆ 43 ರೂಪಾಯಿ.
ಹುಬ್ಬಳ್ಳಿಯಿಂದ ಗದಗ 86 ರೂಪಾಯಿ, ಬೆಳಗಾವಿ 146 ರೂಪಾಯಿ, ಹಾವೇರಿ 106 ರೂಪಾಯಿ, ಕಾರವಾರ 228 ರೂಪಾಯಿ, ವಿಜಯಪುರಕ್ಕೆ 256 ರೂಪಾಯಿ ನಿಗದಿ ಮಾಡಲಾಗಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ 563 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಬಾಗಲಕೋಟ 177 ರೂಪಾಯಿ, ಪಣಜಿ 219 ರೂಪಾಯಿ, ಧರ್ಮಸ್ಥಳಕ್ಕೆ 592 ರೂಪಾಯಿ ನಿಗದಿ ಮಾಡಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್ಸಿನ ದರವನ್ನು ಶೇಕಡಾ 15 ರಷ್ಟು ಏರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.