ಪಾಲಿಕೆ ತಂದಿದ್ದು ನಾವು, ಅದು ನಮ್ಮ ಕನಸು ಎಂದು ಬ್ಯಾನರ್ ಹಾಕುತ್ತಿರುವ ಶಾಸಕ ಅರವಿಂದ ಬೆಲ್ಲದ ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಧಾರವಾಡ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರವಿಂದ ಏಗನಗೌಡರ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಮಾತನಾಡಿದ ಅವರು ಮುರುಘಾಮಠಕ್ಕೆ ಜೋಶಿಯವರು ಬಂದಾಗ, ಸ್ವಾಮೀಜಿ ಪ್ರತ್ತೈಕ ಪಾಲಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದಾಗ, ಜೋಶಿಯವರು ಸ್ವಾಮೀಜಿ, ಅದನ್ನು ಮಾಡೋಕೆ ಆಗಲ್ಲ ಎಂದು ಹೇಳಿದ್ದರು ಎಂದು ಏಗನಗೌಡರ ಆರೋಪಿಸಿದ್ದಾರೆ.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಶಾಸಕ ಅರವಿಂದ ಬೆಲ್ಲದ ಪ್ರತ್ತೈಕ ಪಾಲಿಕೆ ಘೋಷಣೆ ಮಾಡಬಹುದಾಗಿತ್ತು. ಆದ್ರೆ ಅವರು ಅಂದು ಮಾಡದೆ ಕಾಂಗ್ರೇಸ್ ಸರ್ಕಾರ ಮಹಾನಗರ ಪಾಲಿಕೆ ಘೋಷಣೆ ಮಾಡಿದ ಬಳಿಕ ಇದೀಗ ನಾವೇ ಮಾಡಿಸಿದ್ದು ಎಂದು ಹೇಳಿ ಬ್ಯಾನರ್ ಹಾಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಸತತ ಒತ್ತಡದ ಬಳಿಕ ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ಬಂದಿದೆ ಎಂದು ಅರವಿಂದ ಏಗನಗೌಡರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ವಿರೋದ ಪಕ್ಷದ ನಾಯಕ ರಾಜು ಕಮತಿ, ಪ್ರತ್ತೈಕ ಪಾಲಿಕೆ ಹೋರಾಟಗಾರ ರವಿ ಮಾಳಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.