ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದರ್ಶನಕ್ಕೆ ಟಿಕೇಟ್ ಪಡೆಯಲು ಹೋದಂತ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದ ಸಾವನಪ್ಪಿದವರ ಸಂಖ್ಯೆ 7 ಕ್ಕೇ ಏರಿಕೆಯಾಗಿದೆ.
ಜನೆವರಿ 10 ರಿಂದ ಹತ್ತು ದಿನಗಳ ಕಾಲ ವೈಕುಂಠ ದ್ವಾರ ದರ್ಶನಕ್ಕಾಗಿ ಮುಂಚಿತವಾಗಿ ಟಿಕೇಟ್ ಪಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶ್ರೀಮಂತ ಭಕ್ತರು ಹಣ ಪಾವತಿ ಮಾಡಿ ನೇರ ದರ್ಶನ ಪಡೆಯುವ ವ್ಯವಸ್ಥೆ ಇದ್ದರೆ, ಬಡ ಭಕ್ತರು ರಾತ್ರಿಯಿಡಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು ಎನ್ನುವಷ್ಟರಲ್ಲಿ 6 ಜನರ ಪ್ರಾಣ ಹೋಗಿದೆ.
ಮೃತರನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಲಾವಣ್ಯ ಸ್ವಾತಿ (37), ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಶಾಂತಿ (35), ತಮಿಳುನಾಡಿನ ಸೇಲಂ ಮೂಲದ ಮೆಲ್ಲಿಗಾ (50), ಆಂಧ್ರಪ್ರದೇಶದ ನರಸರಾವ್ ಪೇಟಾದವರಾದ ನಾಯ್ಡು ಬಾಬು, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ರಜನಿ, ಕರ್ನಾಟಕದ ಬಳ್ಳಾರಿ ಮೂಲದ ನಿರ್ಮಲಾ, ಎಂದು ಗುರುತಿಸಲಾಗಿದೆ.
ಮೃತರ ಪಾರ್ಥಿವ ಶರೀರಗಳನ್ನು SVIMS ಮತ್ತು RULA ಆಸ್ಪತ್ರೆಗಳಲ್ಲಿ ಇಡಲಾಗಿದೆ. ಮೃತರ ಕುಟುಂಬಗಳಿಗೆ ಆಂಧ್ರ ಸರ್ಕಾರ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿದೆ.