ಧಾರವಾಡದಲ್ಲಿ ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರು ಲ್ಯಾಂಡ್ ಮಾಫಿಯಾ ಚಿಗುರತೊಡಗಿದೆ.
ಧಾರವಾಡದ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಖಾಸಗಿ ಸರ್ವೇಯರ್ ಗಳು ಕೆಲಗೇರಿ ಹದ್ದಿನ ಸರ್ವೇ ನಂಬರ್ 6 ರಲ್ಲಿ ಅಳತೆ ಮಾಡಿ ಹೋಗಿದ್ದಾರೆ.
ಜಮೀನಿನ ಮಾಲೀಕರಿಗೆ ತಿಳಿಸದೇ ಅನಧಿಕೃತವಾಗಿ ಬಂದು ಜಾಗೆಯನ್ನು ಅಳತೆ ಮಾಡಿ ಹೋಗಿದ್ದಾರೆ.
ಧಾರವಾಡದಲ್ಲಿ ಸುಮಾರು 35 ಜನರ ಖಾಸಗಿ ಸರ್ವೇಯರಗಳಿದ್ದು, ಯಾವದೇ ಜಮೀನಿನ ಅಳತೆ ಮಾಡಬೇಕಾದರೆ, ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ನೋಟಿಸ್ ನೀಡಿ ಅಳತೆ ಮಾಡಬೇಕು.
ಲ್ಯಾಂಡ್ ಮಾಫಿಯಾದವರು ಹೇಳಿದಂತೆ ಕೇಳುವ ಇಬ್ಬರು ಖಾಸಗಿ ಸರ್ವೇಯರ್ ಗಳು, ಜಮೀನನ ಅಳತೆ ಮಾಡಿ ಚಕಬಂದಿ ಹಾಕಿ ಹೋಗಿದ್ದಾರೆ.
ಧಾರವಾಡಕ್ಕೆ ನಿವೃತ್ತರ ಸ್ವರ್ಗ ಎಂದು ಕರೆಯುತ್ತಿದ್ದು, ಜಮೀನು ಖರೀದಿಸಿ ಇನ್ನೇನು ಮನೆ ಕಟ್ಟಿ ಕಟ್ಟಿಸಬೇಕು ಅನ್ನುವಷ್ಟರಲ್ಲಿ ಸರ್ವೇಯರ್ ಗಳು ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಇಂತಹವರಿಂದ ಧಾರವಾಡದ ಜನತೆ ಎಚ್ಚರದಿಂದಿರಬೇಕು.