ಮಾರಕಾಸ್ತ್ರದಿಂದ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಅಶೋಕಪ್ಪ ಕೊಬ್ಬಣ್ಣವರ, ಶಾರದಮ್ಮ ಕೊಬ್ಬಣ್ಣವರ ಮೃತ ದುರ್ದೈವಿಗಳಾಗಿದ್ದು, ಗಂಗಾಧರಪ್ಪ ಹತ್ಯೆಗೈದ ಆರೋಪಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಗಂಗಪ್ಪ ಅಶೋಕ, ಶಾರದಾಳನ್ನು ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ. ಅಶೋಕನಿಗೆ ಎರಡನೇ ಹೆಂಡತಿಗೆ ಒಂದು ಮಗುವಿದೆ. ಆರೋಪಿ ಗಂಗಪ್ಪ ಮೊದಲನೇ ಹೆಂಡತಿ ಮಗನಾಗಿದ್ದು, ಆಸ್ತಿ ಹೋಗುತ್ತದೆ ಎಂದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚುವರಿ ಎಸ್ ಪಿ ನಾರಾಯಣ ಭರಮನಿ ಮತ್ತು ಸಿ ಪಿ ಐ ಮುರುಗೇಶ್ ಚನ್ನಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.