ಹುಬ್ಬಳ್ಳಿಯ ಅಶೋಕ್ ನಗರದಲ್ಲಿ ಅಕ್ಕ ಪಕ್ಕದ ಮನೆಯರ ಮಕ್ಕಳು ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದೆ.
ತಕ್ಷಣ ಹೊಯ್ಸಳ 09 ನೇ ದವರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಿ ಇಬ್ಬರೂ ಕಡೆಯವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸರು 112 ನಂಬರಿಗೆ ಕರೆ ಮಾಡಿದ ತಕ್ಷಣ ಅಲ್ಲಿಗೆ ತೆರಳಿ, ಸಮಸ್ಯೆ ಬಗೆಹರಿಸುತ್ತಿದ್ದು, ಅವಳಿ ನಗರದ ನೆಮ್ಮದಿಗೆ ಶ್ರಮ ಹಾಕುತ್ತಿದ್ದಾರೆ.
