ಮಕರ ಸಂಕ್ರಾಂತಿ ನಿಮಿತ್ತ ಇಂದು ಕರ್ನಾಟಕದ ಹಲವು ತೀರ್ಥ ಕ್ಷೇತ್ರಗಳಲ್ಲಿ ವಿಷನಮುಕ್ತ ಪುಣ್ಯ ಸ್ನಾನ ನಂತರ.
ದೇಶದಲ್ಲಿಯೇ ಮೊದಲ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನ ಕರ್ನಾಟಕದಿಂದ ಇಂದು ಆರಂಭವಾಗಲಿದೆ.
ಖ್ಯಾತ ಸಮಾಜ ಸೇವಕ ಮಲ್ಲಿಕಾರ್ಜುನ ರಡ್ಡೇರ ಇವರ ನೇತೃತ್ವದಲ್ಲಿ, ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಮತ್ತು ಆರ್ಗಾನಿಕ್ ಅರಮನೆ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನವನ್ನು ನಡೆಸಲಾಯಿತು.
ಜನರಿಗೆ ನಾಡಿನ ಹಲವು ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನಕ್ಕಾಗಿ ಜನರಿಗೆ ಕಡಲೆ ಹಿಟ್ಟನ್ನು ಉಚಿತವಾಗಿ ಕೊಡಲಾಗುತ್ತಿದೆ.
ಶಾಂಪೂ ಹಾಗೂ ಸಾಬೂನಿನ ಬದಲು, ಕಡಲೆ ಹಿಟ್ಟನ್ನು ಬಳಸಿ ಪುಣ್ಯ ಸ್ನಾನ ಮಾಡಿದರೆ, ವಿಷಜಲ ತಡೆಯಬಹುದು, ಪ್ರಕೃತಿ ಕಾಪಾಡಬಹುದು ಎಂಬ ಈ ಅಭಿಯಾನ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ.
ಮಕರ ಸಂಕ್ರಮಣದ ಇಂದು ವಿವಿಧ ತೀರ್ಥ ಕ್ಷೇತ್ರ ಹಾಗೂ ಸಂಗಮಗಳಲ್ಲಿ ಸುಮಾರು 10 ಸಾವಿರ ಬಳಕೆದಾರರು ಉಚಿತವಾಗಿ ಕಡಲೆ ಹಿಟ್ಟನ್ನು ನೀಡುತ್ತಿದ್ದಾರೆ.